Elephant Attack: ಆನೆ ದಾಳಿಗೆ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರಿಗೆ ಪರಿಹಾರ: ವನ್ಯಜೀವಿ ಮಂಡಳಿಯಿಂದ 5 ಲಕ್ಷ ಚೆಕ್ ವಿತರಣೆ

Elephant Attack: ಆನೆದಾಳಿಗೆ ಬಲಿಯಾದ ಮೃತ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ಪರಿಹಾರದ ಚೆಕ್ ಹಣವನ್ನು ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯರವರು ಇಂದು ವಿತರಿಸಿದರು. ಜಿಲ್ಲೆಯ ದೇವರಪುರ ದೇವರಕಾಡು ಹಾಡಿಯಲ್ಲಿ ಆನೆದಾಳಿಗೆ ಬಲಿಯಾಗಿದ್ದ ಕಾರ್ಮಿಕ ಅಣ್ಣಯ್ಯನವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಬಾಕಿ ಹಣವನ್ನು ಶೀಘ್ರವಾಗಿ ಶಾಸಕ ಎಸ್ ಪೋನ್ನಣ್ಣನವರು ಹಸ್ತಾಂತರ ಮಾಡಿ ಕುಟುಂಬಕ್ಕೆ ಶಾಂತ್ವನ ಹೇಳಲಿದ್ದಾರೆ ಎಂದು ಸಂಕೇತ್ ಪೂವಯ್ಯ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಈಗಾಗಲೇ ದೇವರಪುರಕಾಡಿನಿಂದ ಆನೆ ಓಡಿಸುವ ಕಾರ್ಯಚರಣೆ ಆರಂಭಿಸಲಾಗಿದ್ದು, ಕೂಡಲೇ ಆನೆ ಸೆರೆಗೆ ಅನುಮತಿ ಕೊಡಲಾಗುತ್ತದೆ ಎಂದರು. ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಶಾಸಕ ಎ ಎಸ್ ಪೊನ್ನಣ್ಣನವರು ಅರಣ್ಯ ಸಚಿವರೊಂದಿಗೆ ಮಾತನಾಡಿ ಅನುಮತಿಯನ್ನು ಕೋರಲಾಗಿದೆ ಎಂದರು.
ಸಂಕೇತ್ ಪೂವಯ್ಯರವರೊಂದಿಗೆ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ACF ಗೋಪಾಲ್, RFO ಗಂಗಾಧರ್, ಮಾಜಿ ಜಿಲ್ಲಾಪಂಚಾಯಿತಿ ಸದಸ್ಯ ಬಾನಂಡ ಪೃಥ್ವಿ, ಹಿರಿಯ ಮುಖಂಡರಾದ ಬಸಂತ್, ಬೆನ್ನಿ ಹಾಜರಿದ್ದರು.
Comments are closed.