Tiger Attack: ಗಂಡನ ಜೊತೆ ಜಗಳವಾಡಿ ಕಾರಿನಿಂದ ಇಳಿದ ಪತ್ನಿಯ ಕೊಂಡೊಯ್ದ ಹುಲಿ

Share the Article

Beijing: ಅಭಯಾರಣ್ಯದಲ್ಲಿ ಸಫಾರಿ ಮಾಡುವ ಅನುಭವವೇ ಬೇರೆ. ಪ್ರಕೃತಿ ಸೌಂದರ್ಯದೊಡನೆ ವನ್ಯಜೀವಿಗಳ ನೋಡುವ ಖುಷಿ ಬಹಳ ಮುದ ನೀಡುತ್ತದೆ. ಈ ರೀತಿಯಾಗಿ ಸಫಾರಿ ಮಾಡುವಾಗ ಅಭಯಾರಣ್ಯದ್ದೇ ವಾಹನಗಳನ್ನು ಬಳಸುವುದು ಉತ್ತಮ ಹಾಗೂ ಕೆಲವು ಕಡೆ ಸ್ವಂತ ವಾಹನಗಳಿಗೆ ಅವಕಾಶವಿದ್ದರೂ ಕೂಡ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಈ ರೀತಿಯಾಗಿ ಸ್ವಂತ ವಾಹನದಲ್ಲಿ ಹೋಗುವವರು ಯಾವುದೇ ಕಾರಣಕ್ಕೂ ಕೆಳಗೆ ಇಳಿಯಬಾರದು ಎಂಬುದು ಕೂಡ ಒಂದು ನಿಯಮ.

Darshan Audio : ಕನ್ನಡದ ಕುರಿತು ಕಮಲ್ ಹಾಸನ್ ವಿವಾದ ವಿಚಾರ – ನಟ ದರ್ಶನ್ ಆಡಿಯೋ ಫುಲ್ ವೈರಲ್

ಆದರೆ ಇಲ್ಲೊಂದು ಘಟನೆ ನಡೆದಿದೆ. ಸಫಾರಿಗೆ ಸ್ವಂತ ಕಾರಿನಲ್ಲಿ ಕುಟುಂಬ ಹೋಗುವ ಸಮಯದಲ್ಲಿ ಗಂಡನ ಜೊತೆ ಯಾವುದೋ ಕಾರಣಕ್ಕೆ ಜಗಳವಾಡಿದ್ದಾಳೆ ಪತ್ನಿ ಕಾರಿನ ಹಿಂಭಾಗದ ಸೀಟ್ ನಲ್ಲಿ ಕುಳಿತಿದ್ದು, ಇಳಿದು ಜಗಳವಾದಳು ಬರುವಾಗ, ಹುಲಿಯೊಂದು ಬಂದು ಆ ಮಹಿಳೆಯನ್ನು ಎಳೆದೊಯ್ದಿದೆ.

ಆ ಹೊತ್ತಿಗೆ ಮಹಿಳೆಯ ತಾಯಿ, ಗಂಡ, ಮಗ ಎಲ್ಲರೂ ಗಾಬರಿಯಿಂದ ಕಾರಿನಿಂದ ಹೊರಕ್ಕೆ ಬರುವುದನ್ನು ಅಲ್ಲಿರುವ ಸಿಸಿಟಿವಿಯಲ್ಲಿ ನೋಡಬಹುದಾಗಿದ್ದು, ಇಷ್ಟು ವಿಡಿಯೋ ನೋಡಿದರೆ, ಆ ಹುಲಿ ಮಹಿಳೆಯನ್ನು ಸಾಯಿಸಿರಬಹುದು ಎನ್ನಿಸುವುದು ಉಂಟು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಮಗಳನ್ನು ಉಳಿಸಿಕೊಳ್ಳಲು ತಾಯಿ ತನ್ನ ಪ್ರಾಣವನ್ನು ಪಣಕ್ಕಿಟ್ಟು ಹುಲಿಯನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಅದಾಗಲೇ ಹುಲಿ ಸುಮಾರು ದೂರ ಮಗಳನ್ನು ಎಳೆದೊಯ್ದಿತ್ತು, ಮಗಳನ್ನು ಕಾಪಾಡುವಲ್ಲಿ ತಾಯಿ ಯಶಸ್ವಿಯಾದಳು. ಆದರೆ ಅದೇ ಸಂದರ್ಭದಲ್ಲಿ ಅಲ್ಲಿದ್ದ ಮತ್ತೊಂದು ಹುಲಿ ತಾಯಿಯ ಮೇಲೆರಗಿ ಆಕೆಯನ್ನು ಕೊಂದುಹಾಕಿದೆ. ಮಗಳ ಪ್ರಾಣ ಉಳಿಸಿದ ತಾಯಿ ಕೊನೆಯುಸಿರೆಳೆದಿದ್ದಾಳೆ.

Pavitra Lokesh: ಅಮ್ಮನ ಸವತಿ, ನಟಿ ಸರ್ವಮಂಗಳಾ ಹಾದಿಯಲ್ಲೇ ಅ’ಪವಿತ್ರ’ ನಡಿಗೆ, ಯಾಕೆ ಹೀಗಾದ್ಳು ಪವಿತ್ರಾ ಲೋಕೇಶ್ ?

ಈ ಘಟನೆ ನಡೆದಿರುವುದು 2016ರಲ್ಲಿ ಎನ್ನಲಾಗಿದ್ದು, ಚೀನಾದ ಬೀಜಿಂಗ್​ನಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್​ ಆಗುತ್ತಿದೆ. ಬಡಾಲಿಂಗ್ ವನ್ಯಜೀವಿ ಪಾರ್ಕ್​ನಲ್ಲಿ ಘಟನೆ ನಡೆದಿದ್ದು, ಇದು ಹುಲಿ ಸಫಾರಿ ಪಾರ್ಕ್‌ನಲ್ಲಿ ಸಂಭವಿಸಿದೆ.

ವಿಶ್ವದ ಮೊದಲ ವೀರ್ಯಾಣು ರೇಸ್‌! ಹೇಗಿತ್ತು ಗೊತ್ತಾ ಸ್ಪರ್ಧೆ, ಗೆದ್ದವರು ಯಾರು?

 

 

Comments are closed.