ವಿಹೆಚ್’ಪಿ ನಾಯಕ ಶರಣ್ ಪಂಪ್ವೆಲ್ ಅರೆಸ್ಟ್! ಪೊಲೀಸ್ ಠಾಣೆ ಹಿಂದೂ ಕಾರ್ಯಕರ್ತರ ಆಕ್ರೋಶ

ಮಂಗಳೂರು: ವಿಶ್ವ ಹಿಂದೂ ಪರಿಷತ್ ಮುಖಂಡ (VHP) ಶರಣ್ ಪಂಪ್ವೆಲ್ (Sharan Pumpwell) ರನ್ನು ಅರೆಸ್ಟ್ ಮಾಡಲಾಗಿದೆ. ಮಂಗಳೂರಿನ (Mangaluru) ಕದ್ರಿ ಠಾಣೆ ಪೊಲೀಸರು ಶರಣ್ ಪಂಪ್ವೆಲ್ರನ್ನು ಬಂಧಿಸಿದ್ದಾರೆ. ಹಿಂದೂ ಪರ ಸಂಘಟನೆ ಮುಖಂಡ ಸುಹಾಸ್ ಶೆಟ್ಟಿ ಹತ್ಯೆ (Suhas Shetty Murder Case) ಹಿನ್ನೆಲೆಯಲ್ಲಿ ಬಂದ್ಗೆ (Bandh) ಕರೆ ನೀಡಿದ್ದರು. ಇವತ್ತು ಸಂಜೆ ನಡೆದ ಅಬ್ದುಲ್ ರಹೀಮ್ ಹತ್ಯೆ ನಂತರ ಪ್ರತೀಕಾರದ ಮಾತುಗಳ ಹಿನ್ನೆಲೆಯಲ್ಲಿ ಶರಣ್ ಬಂಧನ ಆಗಿದೆ.

ಕದ್ರಿ ಪೊಲೀಸ್ ಠಾಣೆಯಲ್ಲಿ ಹಿಂದೆ ಎಫ್ಐಆರ್ (FIR) ದಾಖಲಾಗಿತ್ತು. ಇಂದು ಸಂಜೆ ಕದ್ರಿ ಠಾಣೆ ಪೊಲೀಸರು ಶರಣ್ ಪಂಪ್ವೆಲ್ರನ್ನು ಅರೆಸ್ಟ್ ಮಾಡಿದ್ದಾರೆ. ಇನ್ನು ಕದ್ರಿ ಠಾಣೆ ಮುಂದೆ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಶರಣ್ ಪಂಪ್ ವೆಲ್ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ವೆನ್ ಲಾಕ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಮುಸ್ಲಿಂ ನಾಯಕರ ಕೋಪ ತಣ್ಣಗೆ ಮಾಡಲು ಶರಣ್ ಬಂಧನ?
ಹಳೆ ಕೇಸಿನ ಸಂಬಂಧ ಶರಣ್ ಪಂಪ್ ವೆಲ್ ಅವರನ್ನು ಬಂಧಿಸಲಾಗಿದೆ ಎನ್ನುತ್ತಿದ್ದಾರೆ ಪೊಲೀಸರು. ಕದ್ರಿ ಠಾಣೆಯಲ್ಲಿ ಬಿಎನ್ ಎಸ್ ಹಲವು ಸೆಕ್ಷನ್ ಅಡಿಯಲ್ಲಿ ಕೇಸು ದಾಖಲಾಗಿತ್ತು.
ಇತ್ತ ಮುಸ್ಲಿಂ ಯುವಕನ ಕೊಲೆ ಹಿನ್ನೆಲೆಯಲ್ಲಿ ಮುಸ್ಲಿಂ ನಾಯಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಪೊಲೀಸರ ವಿರುದ್ದ ತಿರುಗಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರ ಕೋಪ ತಣ್ಣಗೆ ಮಾಡಲು ಶರಣ್ ಬಂಧನ ಮಾಡಲಾಗಿದೆ ಎನ್ನಲಾಗುತ್ತಿದೆ. ವೈದ್ಯಕೀಯ ಪರೀಕ್ಷೆಯ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತೇವೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
Comments are closed.