Robbery: ಪಡುಬಿದ್ರಿಯಲ್ಲಿ ಮಹಿಳೆಯ ಕರಿಮಣಿ ಸರ ಕಿತ್ತೊಯ್ದು ಎಸ್ಕೇಪ್ ಆದ ಕಳ್ಳರು!

Share the Article

Robbery: ಮಹಿಳೆಯೋರ್ವರು ಕಸ ಎಸೆಯಲು ಮನೆಯ ಗೇಟ್ ಹೊರಗಡೆ ಬಂದಾಗ ಅವರ ಕರಿಮಣಿ ಸರ ಖದೀಮರು ಕಿತ್ತೊಯ್ದು (Robbery) ಎಸ್ಕೇಪ್ ಆದ ಘಟನೆ ಹೆಜಮಾಡಿಯ ಅಮಾವಾಸ್ಯೆಕರಿ ಎಂಬಲ್ಲಿನ ಖಾಸಗಿ ರೆಸಾರ್ಟ್ ನ ಬಳಿ ನಡೆದಿದೆ.

ಐವತ್ತೆರಡು ವರ್ಷದ ತುಳಸಿ ಎಂಬವರ ಕರಿಮಣಿ ಸರ ಎಳೆದ ರಭಸಕ್ಕೆ ಮಹಿಳೆ ಆಯತಪ್ಪಿ ಬಿದ್ದಿದ್ದಾರೆ.

ಒಬ್ಬಾತ ಹೆಲ್ಮೆಟ್ ಧರಿಸಿದ್ದರೆ ಮತ್ತೊಬ್ಬಾತ ಮಾಸ್ಕ್ ಧರಿಸಿದ್ದ. ಸರ ಎಳೆದ ಕೂಡಲೇ ಇವರು ಆಯತಪ್ಪಿ ಬಿದ್ದುದ್ದು ಎದ್ದೇಳುವಷ್ಟರಲ್ಲಿ ಆ ಕಳ್ಳರು ಬಹುದೂರ ಕ್ರಮಿಸಿಯಾಗಿತ್ತು. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.