Mangalore: ಮನೆ ಬಿಟ್ಟು ಹೋದ ಪತ್ನಿ: ದಲ್ಲಾಳಿಯ ಬರ್ಬರ ಹತ್ಯೆ ಪ್ರಕರಣ-ಆರೋಪಿಯ ಬಂಧನ

Mangalore: ವಳಚ್ಚಿಲ್‌ನಲ್ಲಿ ಗುರುವಾರ ರಾತ್ರಿ ನಡೆದ ಘಟನೆಯಲ್ಲಿ ಮದುವೆ ದಲ್ಲಾಳಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆಗೆ ಸಂಬಂಧಪಟ್ಟಂತೆ ಆರೋಪಿ ಮುಸ್ತಾಫಾ (30) ಎಂಬಾತನನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಮೃತರನ್ನು ವಾಮಂಜೂರಿನ ನಿವಾಸಿ ಸುಲೇಮಾನ್ (50) ಎಂದು ಗುರುತಿಸಲಾಗಿದೆ. ಮೃತ ಸುಲೇಮಾನ್ ಅವರ ಇಬ್ಬರು ಪುತ್ರರು ಕೂಡಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆ ವಿವರ:
ಕೊಲೆಯಾದ ಸುಲೇಮಾನ್ ಅವರು ಎಂಟು ತಿಂಗಳ ಹಿಂದೆ ಆರೋಪಿ ಮುಸ್ತಾಫಾನ ಮದುವೆಯನ್ನು ಶಾಹೀನಾಜ್ ಜೊತೆ ಮಾಡಿದ್ದರು. ಈ ವಿವಾಹವು ನಂತರದಲ್ಲಿ ದಂಪತಿಯ ಮಧ್ಯೆ ಕಲಹ ಉಂಟಾಗಿತ್ತು. ಶಾಹೀನಾಜ್ ಕಳೆದ ಎರಡು ತಿಂಗಳಿನಿಂದ ತನ್ನ ತವರು ಮನೆಯಲ್ಲಿದ್ದಳು. ಈ ಬೆಳವಣಿಗೆಯಿಂದ ಮುಸ್ತಾಫಾ ಮತ್ತು ಸುಲೇಮಾನ್ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣ ಉಂಟಾಗಿತ್ತು.
ಗುರುವಾರ ರಾತ್ರಿ ಮುಸ್ತಾಫಾ ಅವರು ಸುಲೇಮಾನ್‌ಗೆ ಆಕ್ಷೇಪಾರ್ಹ ರೀತಿಯಲ್ಲಿ ಫೋನ್ ಕರೆ ಮಾಡಿ ಬೆದರಿಕೆ ಹಾಕಿರುವ ಆರೋಪವಿದೆ. ಇದನ್ನು ಚರ್ಚೆ ಮಾಡಲು ಸುಲೇಮಾನ್ ತನ್ನ ಇಬ್ಬರು ಮಕ್ಕಳಾದ ರಿಯಾಬ್, ಸಿಯಾಬ್ ಜೊತೆ ವಾಲಚ್ಚಿಲ್‌ನಲ್ಲಿರುವ ಮುಸ್ತಾಫನ ಮನೆಗೆ ಬಂದಿದ್ದರು. ಅಲ್ಲಿ ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವುಂಟಾಗಿದೆ.
ಆಗ ಮುಸ್ತಾಫಾ ಏಕಾಏಕಿ ಚಾಕುವಿನಿಂದ ಸುಲೇಮಾನ್‌ಗೆ ಚೂರಿಯಿಂದ ಇರಿದಿದ್ದಾರೆ. ರಕ್ಷಿಸಲು ಹೋದ ಮಕ್ಕಳಿಗೆ ಕೂಡಾ ಮುಸ್ತಾಫ ಚಾಕು ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸುಲೇಮಾನ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ರಿಯಾಬ್, ಸಿಯಾಬ್‌ರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಂಗಳೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ 2023ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ, ಕೊಲೆಯತ್ನ, ದಾಳಿಯ ಆರೋಪಗಳ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿ ಮುಸ್ತಾಫಾನನ್ನು ಬಂಧನ ಮಾಡಲಾಗಿದೆ.
Comments are closed.