Putturu: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾಳೆ ರಾತ್ರಿ ಪತ್ತನಾಜೆ ಉತ್ಸವ!


Putturu: ಇತಿಹಾಸಪ್ರಸಿದ್ಧ ಪುತ್ತೂರು (Putturu) ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ 24ರಂದು ರಾತ್ರಿ ಪತ್ತನಾಜೆ ಉತ್ಸವ ನಡೆಯಲಿದೆ.

ಪತ್ತನಾಜೆ ದಿನ ಬೆಳಿಗ್ಗೆ, ಮಧ್ಯಾಹ್ನ ವಿಶೇಷ ಪೂಜೆ, ಸಂಜೆ ಶ್ರೀ ದೇವರ ನಿತ್ಯ ಬಲಿ -ಉತ್ಸವದಲ್ಲಿ ಉಡಿಕೆ, ಚೆಂಡೆ, ವಾದ್ಯ ಸುತ್ತು ಪಲ್ಲಕಿ ಉತ್ಸವ ಮತ್ತು ಸೇವೆಯ ಬಳಕ ವಸಂತ ಪೂಜೆ ಸೇವೆ ಮಾಡಿಸಿದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಲಿದೆ. ದೇವರು ಗರ್ಭಗುಡಿ ಪ್ರವೇಶಿಸಿದ ಬಳಿಕ ಪತ್ತನಾಜೆ ಉತ್ಸವದ ಪ್ರಸಾದ ರೂಪವಾಗಿ ಫಲವಸ್ತುಗಳನ್ನು ದೇವಳದ ಹೊರಾಂಗಣದಲ್ಲಿ ಭಕ್ತಾದಿಗಳಿಗೆ ವಿತರಣೆ ಮಾಡಲಾಗುವುದು ಎಂದು ದೇವಳದ ಪ್ರಕಟಣೆ ತಿಳಿಸಿದೆ.

Comments are closed.