Mumbai: ಅಪ್ರಾಪ್ತ ವಿದ್ಯಾರ್ಥಿಗಳನ್ನು ಬಳಸಿ ಪತಿಯನ್ನೇ ಸುಟ್ಟು ಚಟ್ಟಕ್ಕೇರಿಸಿದ ಪ್ರಾಂಶುಪಾಲೆ!

Mumbai: ತಾನು ಪ್ರಾಂಶುಪಾಲೆಯಾಗಿದ್ದ ಶಾಲೆಯ ಅಪ್ರಾಪ್ತ ವಿದ್ಯಾರ್ಥಿಗಳನ್ನು ಬಳಸಿ ಪ್ರಾಂಶುಪಾಲೆ ಓರ್ವಳು ತನ್ನ ಪತಿಯನ್ನೇ ಕೊಂದು ಬಳಿಕ ಸುಟ್ಟು ಹಾಕಿದ ಘಟನೆ ಮುಂಬೈನ ನಾಗಪುರದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ನಾಗಪುರದ ಶಾಂತನು ದೇಶಮುಖ್ (32 ವರ್ಷ) ಮೃತಪಟ್ಟ ವ್ಯಕ್ತಿಯಾಗಿದ್ದು ನಾಗಪುರದ ಸನ್ ರೈಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆಯಾಗಿರುವ ನಿಧಿ ದೇಶಮುಖ್ (24 )ಎಂಬಾಕೆಯೇ ತನ್ನ ಪತಿಯನ್ನು ಕೊಂದು ಸುಟ್ಟು ಹಾಕಿದ ಮಹಾಪರಮ ಪಾಪಿ ಪ್ರಾಂಶುಪಾಲೆಯಾಗಿದ್ದಾಳೆ.
ತಾನು ಪ್ರಾಂಶು ಪಾಲೆಯಾಗಿದ್ದ ಈ ಶಾಲೆಯ ಅಪ್ರಾಪ್ತ ವಿದ್ಯಾರ್ಥಿಗಳ ಸಹಾಯ ಪಡೆದ ಈಕೆ ಪತಿಯನ್ನು ಹತ್ಯೆಗೈದು ಬಳಿಕ ಅಪ್ರಾಪ್ತ ವಿದ್ಯಾರ್ಥಿಗಳ ಸಹಾಯ ಪಡೆದು ಮೃತ ದೇಹಕ್ಕೆ ಪೆಟ್ರೋಲ್ ಸುರಿದು ಸುಟ್ಟಿದ್ದಾಳೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಇದೀಗ ಪರಮ ಪಾಪಿ ಪ್ರಾಂಶುಪಾಲೆ ನಿಧಿಯನ್ನು ಬಂಧಿಸಿದ್ದು ಈ ವೇಳೆ ತಾನೇ ಪತಿಯನ್ನು ಕೊಂದಿರುವುದಾಗಿ ತಿಳಿಸಿದ್ದಾಳೆ ಆದರೆ ಪೊಲೀಸರ ತನಿಖೆಯಲ್ಲಿ ಈಕೆ ತಾನು ಕಲಿಸುತ್ತಿರುವ ಅಪ್ರಾಪ್ತ ವಿದ್ಯಾರ್ಥಿಗಳನ್ನು ಈ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾಳೆಂದು ತಿಳಿದು ಬಂದಿರುವುದರಿಂದ ಪೊಲೀಸರು ಇದೀಗ ಆ ಅಪ್ರಾಪ್ತ ವಿದ್ಯಾರ್ಥಿಗಳನ್ನು ಸಹ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
Comments are closed.