ಶಿಶಿಲ ಶಿಬಾಜೆಯ ಬರ್ಗುಳ ಎಂಬಲ್ಲಿ ಹಳ್ಳದಲ್ಲಿ ಅಪರಿಚಿತ ವ್ಯಕ್ತಿಯ ಕೊಳೆತ ಶವ ಪತ್ತೆ

ಬರ್ಗುಳ ನಿವಾಸಿ ಶೀ ನಪ್ಪ ಎಂಬವರ ಮನೆಯ ಪಕ್ಕ ಹರಿಯುತ್ತಿರುವ ಹಳ್ಳ ಒಂದರಲ್ಲಿ ಇಂದು ಬೆಳಿಗ್ಗೆ ಅಪರಿಚಿತ ಶವವೊಂದು ಒಂದು ತೇಲುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಶೀ ನಪ್ಪ ಅವರು ಸ್ಥಳೀಯ ಪೊಲೀಸರು ಮತ್ತು ಶೌರ್ಯವಿಪತ್ತು ತಂಡಕ್ಕೆ ಮಾಹಿತಿ ನೀಡಿದ್ದರು. ಇದರಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಶೌರ್ಯ ವಿಪತ್ತು ತಂಡದ ಮೂಲಕ ಹಳ್ಳದಲ್ಲಿ ಹೇಳುತ್ತಿದ್ದ ಶವವನ್ನು ಮೇಲಕ್ಕೆತ್ತುವ ಕಾರ್ಯ ನಡೆಸಿದ್ದಾರೆ.
ಶಿಶಿಲ ಹಾಗೂ ಘಟ್ಟ ಪ್ರದೇಶಗಳ ಭಾಗಗಳಲ್ಲಿ ನಿನ್ನೆಯಿಂದ ವಿಪರೀತ ಮಳೆಯಾಗುತ್ತಿದ್ದ ಕಾರಣ ನದಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು ಈ ಮೃತ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಇರುವುದರಿಂದ ಮೃತ ವ್ಯಕ್ತಿ ಸ್ಥಳೀಯರೋ ಅಥವಾ ಅಪರಿಚಿತರೋ ಎಂದು ಇನ್ನಷ್ಟೇ ತಿಳಿದು ಬರಬೇಕಾಗಿದೆ.

Comments are closed.