ಯು ಟ್ಯೂಬರ್ ಜ್ಯೋತಿ ಬೇಹುಗಾರಿಕೆ: NIA ಗೆ ದೂರು ನೀಡಿದ್ದರೂ ನಿರ್ಲಕ್ಷ್ಯ?, ದೂರು ಟ್ವೀಟ್ ವೈರಲ್!

Share the Article

New delhi: ಪಾಕ್ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಹಿಸಾರ್ ಮೂಲದ ಟ್ರಾವೆಲ್ ವ್ಲಾಗರ್ ಜ್ಯೋತಿ ಮಲ್ಹೋತ್ರಾ ಬಂಧನಕ್ಕೊಳಗಾಗಿದ್ದು, ಬಂಧನಕ್ಕೂ ಹಲವು ತಿಂಗಳ ಮೊದಲೇ ವ್ಯಕ್ತಿಯೊಬ್ಬ ಆಕೆಗೂ ಹಾಗೂ ಪಾಕಿಸ್ತಾನಕ್ಕೂ ಇರಬಹುದಾದ ನಂಟಿನ ಕುರಿತಾಗಿ ಕಳವಳ ವ್ಯಕ್ತಪಡಿಸಿದ್ದ ಎನ್ನುವ ವಿಷಯ ಈಗ ಬಹಿರಂಗ ಗೊಂಡಿದೆ. ಈ ವ್ಯಕ್ತಿ ಅಂದು ನೇರವಾಗಿ NIA ಗೆ ಟ್ವೀಟ್ ಮಾಡಿದ್ದ ವಿಷಯ ಇದೀಗ ಬಹಿರಂಗಗೊಂಡು ವೈರಲ್ ಆಗಿದೆ.

“ಟ್ರಾವೆಲ್ ವಿತ್ ಜೋ” ಎಂಬ ಯೌಟ್ಯೂಬ್ ಚಾನೆಲ್‌ಗೆ ಹೆಸರುವಾಸಿಯಾದ ಮಲ್ಹೋತ್ರಾರನ್ನು ಮೇ 2025 ರಲ್ಲಿ ಬಂಧಿಸಲಾಗಿದ್ದು, ಒಂದು ವರ್ಷಕ್ಕೂ ಹಿಂದಿನ ಹಳೆಯ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಪಾಕಿಸ್ತಾನದೊಂದಿಗಿನ ಅವರ ಸಂಪರ್ಕದ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು.

ಆಕೆ 2023 ರಲ್ಲಿ ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದ್ದು, ಕಪಿಲ್ ಜೈನ್ ಎಂಬ ಎಕ್ಸ್(X) ಬಳಕೆದಾರರು ಮೇ 2024 ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಆಕೆಯ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸುವಂತೆ ಎಚ್ಚರಿಕೆ ನೀಡಿದ್ದರು.

“ಆಕೆ ಮೊದಲು ಪಾಕಿಸ್ತಾನದ ರಾಯಭಾರ ಕಚೇರಿಗೆ ಭೇಟಿ ನೀಡಿ ನಂತರ 10 ದಿನಗಳ ಕಾಲ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಈಗ ಆಕೆ ಮತ್ತೆ ಕಾಶ್ಮೀರಕ್ಕೆ ಹೋಗುತ್ತಿದ್ದು, ಇದೆಲ್ಲದರ ಹಿಂದೆ ಏನಾದರೂ ಲಿಂಕ್ ಇರಬಹುದು”ಎಂದು ಜೈನ್ ರವರು ಜ್ಯೋತಿ ಮಲ್ಹೋತ್ರಾರ ಯೂಟ್ಯೂಬ್ ಪುಟದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡು ಪೋಸ್ಟ್ ಮಾಡಿದ್ದರು.

ಹಾಗೂ ಈಕೆ ದೆಹಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನಿ ಸಿಬ್ಬಂದಿಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ಆರೋಪಿಸಲಾಗಿದ್ದು, ಮೇ 13 ರಂದು, ಬೇಹುಗಾರಿಕೆಯಲ್ಲಿ ತೊಡಗಿರುವ ಆರೋಪದ ಮೇಲೆ ಭಾರತ ಆ ಪಾಕಿಸ್ತಾನಿ ಅಧಿಕಾರಿಯನ್ನು ಹೊರಹಾಕಿತ್ತು.

ಪಿಟಿಐ ಸುದ್ದಿ ಸಂಸ್ಥೆಯ ಪ್ರಕಾರ, 2023 ರಲ್ಲಿ, ಜ್ಯೋತಿ ನೆರೆಯ ರಾಷ್ಟ್ರಕ್ಕೆ ಭೇಟಿ ನೀಡಲು ವೀಸಾ ಪಡೆಯಲು ಪಾಕಿಸ್ತಾನ ಹೈಕಮಿಷನ್‌ಗೆ ಹೋದಾಗ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಅವರನ್ನು ಸಂಪರ್ಕಿಸಿದ್ದರು ಎಂದು ಮೇ 16 ರಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ ಎನ್ನುವ ಮಾಹಿತಿ ಈಗ ಗೊತ್ತಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ನೈಗೆ ವರ್ಷಗಳ ಹಿಂದೆಯೇ ಬಿಕೆ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದ ರೂ, NIA ಯಾಕೆ ನಿಷ್ಕ್ರಿಯತೆ ತೋರಿತ್ತು ಅನ್ನೋದು ಈಗ ಎದ್ದಿರುವ ಇನ್ನೊಂದು ಪ್ರಶ್ನೆ.

Comments are closed.