Actor Darshan: ವಿವಾಹ ವಾರ್ಷಿಕೋತ್ಸವ : ವಿದೇಶದಲ್ಲಿ ಪತ್ನಿಯೊಂದಿಗೆ ದರ್ಶನ್ ಪಾರ್ಟಿ!

Actor Darshan : ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಹಾಗೂ ವಿಜಯಲಕ್ಷ್ಮೀಗೆ 23ನೇ ಮದುವೆ ವಾರ್ಷಿಕೋತ್ಸವದ ಸಂಭ್ರಮ. ದರ್ಶನ್ ಮ್ಯಾರೇಜ್ ಆನಿವರ್ಸರಿ ಖುಷಿಯಲ್ಲಿ ಪತ್ನಿ ವಿಜಯ್ ಲಕ್ಷ್ಮೀ ಕೈಹಿಡಿದು ‘ಮುದ್ದು ರಾಕ್ಷಸಿ’ ಹಾಡಿಗೆ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿದ್ದಾರೆ.

ಈ ಮುದ್ದಾದ ಜೋಡಿಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಮದುವೆ ಆ್ಯನಿವರ್ಸರಿ ವಿಶೇಷವಾಗಿ ಆಚರಿಸಲು ಇಂಡೋನೇಷ್ಯಾದ ಬಾಲಿಗೆ ದರ್ಶನ್ ದಂಪತಿಗೆ ತೆರಳಿದ್ದಾರೆ. ಈ ಸಂಭ್ರಮಕ್ಕೆ ನಟ ಚಿಕ್ಕಣ್ಣ ಕೂಡ ಸಾಥ್ ನೀಡಿದ್ದಾರೆ.
ವಿಶೇಷವಾಗಿ ಪತ್ನಿಗಾಗಿ ದರ್ಶನ್ ಹಿಂದಿ ಹಾಡೊಂದನ್ನು ಹಾಡಿದ್ದಾರೆ. ಅದಷ್ಟೇ ಅಲ್ಲ ವಿಜಯಲಕ್ಷ್ಮಿ ಕೂಡ ಹಾಡು ಹಾಡುತ್ತಾ ಎಂಜಾಯ್ ಮಾಡಿದ್ದಾರೆ. ಕಳೆದ ವರ್ಷ ಮದುವೆ ಆ್ಯನಿವರ್ಸರಿಯನ್ನು ದುಬೈಯಲ್ಲಿ ಅದ್ಧೂರಿಯಾಗಿ ದರ್ಶನ್ ದಂಪತಿ ಆಚರಿಸಿದ್ದರು. ಈ ವರ್ಷ ಬಾಲಿ ಯಲ್ಲಿ ಆಚರಿಸಿದ್ದಾರೆ.
Comments are closed.