JPL: ಮಥುರಾ ಜೈಲಿನಲ್ಲಿ ಕೈದಿಗಳಿಗಾಗಿ ಐಪಿಎಲ್ ರೀತಿಯಲ್ಲಿ ಜೆಪಿಎಲ್

JPL: ಜನಪ್ರಿಯ ಐಪಿಎಲ್ ಪಂದ್ಯಾವಳಿಗಳ ಮಾದರಿಯಲ್ಲೇ ಮಥುರಾದಲ್ಲಿ ಕೈದಿಗಳಿಗಾಗಿ ಕ್ರಿಕೆಟ್ ಲೀಗ್ ನಡೆಸಲಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ರೀತಿ ಜೈಲು ಪ್ರೀಮಿಯರ್ ಲೀಗ್ ಆಯೋಜಿಸಿದ್ದು, ಕೈದಿಗಳು ಜೈಲಿನಲ್ಲಿ ಕ್ರಿಕೆಟ್ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಐಪಿಎಲ್ ಮಾದರಿಯ ಲ್ಲಿಯೇ ಈ ಜೆಪಿಎಲ್ ಆಯೋಜಿಸಲಾಗಿತ್ತು. ಐಪಿಎಲ್ ರೀತಿ ಒಟ್ಟು 8 ತಂಡಗಳು ಒಟ್ಟು 12 ಪಂದ್ಯ ಆಡಿವೆ.
ಕೈದಿಗಳ ಈ ಪ್ರೀಮಿಯರ್ ಲೀಗ್ನ ಫೈನಲ್ನಲ್ಲಿ ನೈಟ್ ರೈಡರ್ಸ್ ತಂಡ ಕ್ಯಾಪಿಟಲ್ಸ್ ಎದುರು ಜಯ ಸಾಧಿಸಿ ಚಾಂಪಿಯನ್ ಆಗಿದೆ. ಇಷ್ಟು ಮಾತ್ರವಲ್ಲದೇ ಇಂಡಿಯನ್ ಪ್ರೀಮಿಯರ್ ಲೀಗ್ ರೀತಿಯೇ ಇಲ್ಲಿಯೂ ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ. ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಕೈದಿಗಳಿಗೆ ನೀಡಲಾಗಿದೆ. ಇನ್ನು ಕೈದಿಗಳಲ್ಲಿನ ಒತ್ತಡ ಕಡಿಮೆ ಮಾಡಲು ಜೆಪಿಎಲ್ ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments are closed.