Mangalore: ಅಪರೇಷನ್ ಸಿಂಧೂರ ಹಾಗೂ ಪತ್ರಕರ್ತನ ಸೋದರ ಸಂಬಂಧ ಫಿನಿಷ್ ಎಂಬ ಸುಳ್ಳು ಸುದ್ದಿ- ದೂರು ದಾಖಲು

Mangalore: ಅಪರೇಷನ್ ಸಿಂಧೂರ ಹಾಗೂ ವಾರ್ತಾಭಾರತಿ ದೈನಿಕದ ಹೆಸರು ಕುರಿತು ಸುಳ್ಳು ಸುದ್ದಿ ಹರಡುತ್ತಿರುವ ಮೂವರು ವ್ಯಕ್ತಿಗಳು ಹಾಗೂ ಪುತ್ತೂರು ಮೂಲದ ವೆಬ್‌ಸೈಟ್‌ವೊಂದರ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಾರ್ತಾಭಾರತಿಯ ಸುದ್ದಿ ಸಂಪಾದಕ ಬಿ.ಎಂ.ಬಶೀರ್ ಅವರು ದೂರು ದಾಖಲು ಮಾಡಿದ್ದಾರೆ.
ನಿತಿನ್ ಶಾಮನೂರು ಎಂಬುವವರು ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ʼಅಪರೇಷನ್ ಸಿಂಧೂರ್”: ಕನ್ನಡ ಪತ್ರಕರ್ತನ ಸೋದರ ಸಂಬಂಧಿಯ ಪತ್ನಿ ಫಿನಿಷ್ʼ ಎಂಬ ಶೀರ್ಷಿಕೆಯಡಿಯಲ್ಲಿ ಒಬ್ಬ ಮಹಿಳೆಯ ಫೋಟೋ ಹಾಗೂ ಸೈನಿಕರ ಫೋಟೋ ಜೊತೆ ಸುಳ್ಳು ಸುದ್ದಿಯನ್ನು ಪ್ರಕಟ ಮಾಡಲಾಗಿದೆ. ಸಂತೋಷ್ ಹೆಗಡೆ ಎಂಬಾತ ಇದನ್ನು ತನ್ನ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾನೆ ಎಂದು ವರದಿಯಾಗಿದೆ.
ಪುತ್ತೂರಿನ ಬೊಳುವಾರಿನ ದ್ವಿಚಕ್ರ ವಾಹನ ಶೋರೂಮ್ ಸಿಬ್ಬಂದಿ ಬೆಟ್ಟಂಪಾಡಿಯ ಚಂದ್ರ ಎಂಬುವರ Bettampady Chandra ಎಂಬ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿಯೂ ಇದೇ ಸುಳ್ಳು ಸುದ್ದಿಯನ್ನು ಶೇರ್ ಮಾಡಲಾಗಿದೆ ಎಂದು ವರದಿಯಾಗಿದೆ. ಹಾಗೂ ಒಂದು ವೆಬ್‌ಸೈಟ್ ಕೂಡಾ ಈ ಸುದ್ದಿಯನ್ನು ವರದಿಯನ್ನು ಮಾಡಿದೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
Comments are closed.