Mandya: ಮೇಲುಕೋಟೆ ಶಾಲಾ ಶಿಕ್ಷಕಿ ಕೊಲೆ ಪ್ರಕರಣ – ಆರೋಪಿಯ ತಂದೆಯನ್ನು ಕೊಂದು ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ

Mandya: ಕಳೆದ ವರ್ಷ ಖಾಸಗಿ ಶಾಲೆ ಒಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಮಂಡ್ಯ(Mandya) ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮಾಣಿಕ್ಯಹಳ್ಳಿ ಗ್ರಾಮದ ನಿವಾಸಿಯಾಗಿದ್ದ ದೀಪಿಕಾ(28) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅವರ ತಂದೆ ಪ್ರತೀಕಾರ ತೀರಿಸಿಕೊಂಡಿದ್ದಾರೆ.
ಹೌದು, ನರಸಿಂಹೇಗೌಡ ಅವರ ಪುತ್ರ ನಿತೀಶ್, ವೆಂಕಟೇಶ್ ಅವರ ಪುತ್ರಿ ದೀಪಿಕಾಳನ್ನ ಕೊಲೆ ಮಾಡಿದ್ದ. ಇದೀಗ 16 ತಿಂಗಳು ಕಾದು ಮಗಳ ಸಾವಿಗೆ ತೀರಿಸಿಕೊಳ್ಳಲು ಹತ್ಯೆ ಮಾಡಿದ್ದ ಆರೋಪಿಯ ತಂದೆಯನ್ನು ಶಿಕ್ಷಕಿಯ ತಂದೆ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯದ ಮಾಣಿಕ್ಯಹಳ್ಳಿ ಯಲ್ಲಿ ನಡೆದಿದೆ.
ಇದೇ ತಿಂಗಳ ಮೇ 6ರಂದು ಮಾಣಿಕ್ಯನಹಳ್ಳಿ (Manikyanahalli) ಗೇಟ್ ಬಳಿ ನರಸಿಂಹೇಗೌಡ ಟೀ ಕುಡಿಯಲು ಹೋಗಿದ್ದ, ಈ ವೇಳೆ ಸಹವಾಗಿಯೇ ಬಂದ ದೀಪಕಾಳ ತಂದೆ ನರಸಿಂಹನಿಗೆ ಚಾಕುವಿನಿಂದ ಚುಚ್ಚಿ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದ. ನನ್ನ ಮಗಳನ್ನ ಕೊಂದುಬಿಟ್ಟೆ ಅಲ್ವಾ? ನಿನ್ನ ಮಗಳ ಮದುವೆಯನ್ನ ಹೆಂಗೆ ಖುಷಿಯಾಗಿ ಮಾಡ್ತೀಯಾ? ನಿನ್ನನ್ನ ಬಿಡಲ್ಲ, ಮಗಳ ಕೊಂದ ನಿನ್ನ ಮಗನನ್ನೂ ಬಿಡಲ್ಲ ಎನ್ನುತ್ತಲೇ ಮನಸ್ಸೋ ಇಚ್ಚೆ ಚಾಕುವಿನಿಂದ ಇರಿದು, ಚುಚ್ಚಿ ಹತ್ಯೆ ಮಾಡಿದ್ದ. ಈ ಭೀಕರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಳೆದ ರಾತ್ರಿ ಪೊಲೀಸರಿಗೆ ಲಭ್ಯವಾಗಿದೆ.
ಏನಿದು ಪ್ರಕರಣ?
ಟೀಚರ್ ದೀಪಿಕಾ ಮತ್ತು ನಿತೀಶ್ ಇಬ್ಬರು ಸ್ನೇಹ ಹಾಗೂ ಸಲುಗೆಯಿಂದಿದ್ದರು. ಇದನ್ನು ಗಮನಿಸಿದ ದೀಪಿಕಾ ಗಂಡ ಹಾಗೂ ಕುಟುಂಬಸ್ಥರು ನಿತೀಶ್‌ಗೆ ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ದೀಪಿಕಾ ಬಳಿ ಪ್ರಶ್ನಿಸಿದಾಗ ಆತ ನನಗೆ ತಮ್ಮ ಇದ್ದಂತೆ ಎಂದು ಹೇಳಿದ್ದಳು. ಕುಟುಂಬಸ್ಥರ ಎಚ್ಚರಿಕೆಯ ಬಳಿಕ ಇಬ್ಬರು ಅಂತರ ಕಾಯ್ದುಕೊಂಡಿದ್ದರು.
ದೀಪಿಕಾ ಜೊತೆ ಒಡನಾಟವಿಲ್ಲದೇ ನಿತೀಶ್ ಕೋಪಗೊಂಡಿದ್ದ. ಬಳಿಕ 2024 ಜ. 22ರಂದು ನಿತೀಶ್ ಬರ್ತ್ಡೇ ನೆಪದಲ್ಲಿ ದೀಪಿಕಾಳನ್ನು ಬೆಟ್ಟದ ತಪ್ಪಲಿಗೆ ಕರೆಸಿಕೊಂಡಿದ್ದ. ದೀಪಿಕಾ ಆತನಿಗೆ ಶರ್ಟ್ ಗಿಫ್ಟ್ ಕೊಡಲು ಹೋಗಿದ್ದಳು. ಈ ವೇಳೆ ಇಬ್ಬರ ನಡುವೆ ಜಗಳ ಆರಂಭವಾಗಿ, ಕೊಲೆಯಲ್ಲಿ ಅಂತ್ಯವಾಗಿತ್ತು. ಮಂಡ್ಯ ಪೊಲೀಸರು ಕೊಲೆ ಆರೋಪಿ ನಿತೀಶ್‌ನನ್ನು ಬಂಧಿಸಿದ್ದರು.
Comments are closed.