Microsoft: ಮೈಕ್ರೋಸಾಫ್ಟ್‌ನಿಂದ 6,000 ಉದ್ಯೋಗಿಗಳು ವಜಾ !

Share the Article

Microsoft: ಮೈಕ್ರೋಸಾಫ್ಟ್ (Microsoft) ವಿಶ್ವದಾದ್ಯಂತ ತನ್ನ ಸಿಬ್ಬಂದಿಯ ಶೇಕಡಾ 3 ರಷ್ಟು, ಅಂದರೆ ಸುಮಾರು 6,000 ಉದ್ಯೋಗಿಗಳನ್ನು ವಜಾಗೊಳಿಸಿರುವುದಾಗಿ ಮಾಹಿತಿ ಹೊರಬಿದ್ದಿದೆ. ನಿರ್ವಹಣಾ ಹಂತದ ಪುನರ್‌ರಚನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದ್ದು, ಅಮೆರಿಕಾ ಸೇರಿದಂತೆ ಹಲವು ಭೌಗೋಳಿಕ ಪ್ರದೇಶಗಳಲ್ಲಿನ ಸಿಬ್ಬಂದಿಗೆ ಮಂಗಳವಾರವೇ ಸೂಚನೆ ನೀಡಲಾಗಿದೆ.

ಕಂಪನಿಯು ಮಂಗಳವಾರ ಅಧಿಕೃತ ಸೂಚನೆಗಳನ್ನು ಬಿಡುಗಡೆ ಮಾಡಿದ್ದು, ಈ ನಿರ್ಧಾರವು ಮುಖ್ಯವಾಗಿ ನಿರ್ವಹಣಾ ಮಟ್ಟ ಕಡಿತಗೊಳಿಸುವ ಉದ್ದೇಶದೊಂದಿಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ. ಅಸೋಸಿಯೇಟೆಡ್ ಪ್ರೆಸ್ ವರದಿಯಂತೆ, ನಿಖರ ವಜಾಗೊಳಿಕೆಯ ಸಂಖ್ಯೆಯ ವಿವರವನ್ನು ಮೈಕ್ರೋಸಾಫ್ಟ್ ಬಹಿರಂಗಪಡಿಸಿಲ್ಲ.

Comments are closed.