Viral Video : ನನ್ನನ್ನು ಸಾಕೋ ಯೋಗ್ಯತೆ ಇಲ್ಲ, ಕಾಫಿ ಲೋಟ ತೊಳೆದು ಜೀವನ ಮಾಡ್ತಿದ್ದೀನಿ, 5 ಕೋಟಿ ಹಗರಣಕ್ಕೆ ತಾಯಿಯೇ ಸಾಥ್- ಹೆಂಡತಿ, ಮಗಳ ಮೇಲೆ ಚೈತ್ರ ಕುಂದಾಪುರ ತಂದೆ ಆಕ್ರೋಶ !!

Viral Video : ಹಿಂದೂ ಫೈರ್ ಬ್ರಾಂಡ್ ಆಗಿ ಖ್ಯಾತಿಗಳಿಸಿರುವ ಚೈತ್ರ ಕುಂದಾಪುರ ಅವರು ಇತ್ತೀಚಿಗಷ್ಟೇ ಹಸೆಮಣೆ ಏರಿದ್ದಾರೆ. ಕೆಲವು ವಿವಾದಗಳ ಸುಳಿಯಲ್ಲಿ ಸಿಲುಕಿದ್ದ ಚೈತ್ರ ಬಿಗ್ ಬಾಸ್ ಗೆ ಹೋಗುವ ಮುಖಾಂತರ ಜನಮನ ಗೆದ್ದಿದ್ದರು.
ಚೈತ್ರ ಕುಂದಾಪುರ ಅವರು ಎಲ್ಲೆಡೆ ತಮ್ಮ ತಾಯಿ ಮತ್ತು ತಂಗಿಯನ್ನು ಪರಿಚಯಿಸುತ್ತಲೇ ಇದ್ದರು. ಆದರೆ ಇವರ ತಂದೆ ಯಾರು ಎಂಬುದು ಹಲವರಿಗೆ ಕುತೂಹಲವಾಗಿತ್ತು. ಮದುವೆ ಸಮಯದಲ್ಲೂ ಕೂಡ ಚೈತ್ರ ತಮ್ಮ ತಂದೆಯನ್ನು ಪರಿಚಯಿಸಿರಲಿಲ್ಲ. ಹೀಗಾಗಿ ಜನರ ಕುತೂಹಲ ಇನ್ನೂ ಹೆಚ್ಚಾಗಿತ್ತು. ಆದರೆ ಇದರ ನಡುವೆಯೇ ಚೈತ್ರ ಕುಂದಾಪುರ ಅವರ ತಂದೆ ದಿಢೀರ್ ಎಂದು ಪ್ರತ್ಯಕ್ಷ ಆಗಿ, ಮಾಧ್ಯಮದವರ ಎದುರು ಮಗಳು ಮತ್ತು ತನ್ನ ಹೆಂಡತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಚೈತ್ರ ಕುಂದಾಪುರವರ ತಂದೆ ನಾನು ಯಾವುದೋ ಯಾವುದೋ ಹೋಟೆಲ್ ಗಳಲ್ಲಿ ದೋಸೆ ಮಾಡುತ್ತಾ, ಟೀ ಕಾಫಿ ಮಾಡುತ್ತಾ, ಕಾಫಿ ಲೋಟಗಳನ್ನು ತೊಳೆಯುತ್ತಾ ಜೀವನ ನಡೆಸುತ್ತಿದ್ದೇನೆ. ನನಗೆ ಒಂದು ತುತ್ತು ಅನ್ನ ಹಾಕುವ ಯೋಗ್ಯತೆ ಇವಳಿಗೆ ಇಲ್ಲ ಎಂದು ಮಗಳು ಚೈತ್ರ ಕುಂದಾಪುರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://youtu.be/OFOcMhDAxZs?si=dlG-ZSo05wwUKO-W
ಅಲ್ಲದೆ ನಿಮ್ಮ ಹೆಂಡತಿ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದ್ದಕ್ಕೆ ಅವಳು ಹಾಗೆ, ಮಗಳು 5 ಕೋಟಿ ಹಗರಣ ಮಾಡಿ ಮನೆಗೆ ತಂದು ಸುರಿಯುತ್ತಿದ್ದಾಗ ಬಾಯಿ ಮುಚ್ಚಿಕೊಂಡು ಸುಮ್ಮನಿದ್ದಳು. ಒಂದು ದಿನವೂ ಇದು ತಪ್ಪು ಎಂದು ಮಗಳಿಗೆ ಬುದ್ಧಿ ಹೇಳಲಿಲ್ಲ. ಮಗಳಿಗೆ ಸಪೋರ್ಟ್ಟಾಗಿ ನಿಂತು ಎಲ್ಲವನ್ನು ಮಾಡಿಸುತ್ತಾಳೆ. ಅವಳಿಗೆ ಗಂಡ ಬೇಡ, ಮಕ್ಕಳು ಬೇಡ, ಗಂಡನ ಮರ್ಯಾದೆ ಬೇಡ. ಗಂಡನೊಂದಿಗೆ ಸ್ವಾಭಿಮಾನದಿಂದ ಬದುಕಬೇಕೆಂಬ ಛಲ ಇಲ್ಲ’ ಎಂದು ವಾಗ್ದಾಳಿ ನಡೆದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Comments are closed.