Hubballi: 9ನೇ ತರಗತಿ ಹುಡುಗನ ಇರಿದು ಕೊಂದ 6ನೇ ತರಗತಿ ಬಾಲಕ

Hubballi: ಬಾಲಕರಿಬ್ಬರ ನಡುವಿನ ಜಗಳವು ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯಗೊಂಡಿದೆ. ಡಿಜೆ ಮತ್ತು ಲೈಟಿಂಗ್ ವಿಚಾರಕ್ಕೆ ಸಂಬಂಧಪಟ್ಟಂತೆ ನಡೆದ ಜಗಳ ಉಂಟಾಗಿದೆ. 9ನೇ ತರಗತಿ ಬಾಲಕನಿಗೆ 6ನೇ ತರಗತಿಯ ಹುಡುಗ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಹುಬ್ಬಳ್ಳಿಯ ಗುರುಸಿದ್ದೇಶ್ವರ ನಗರದಲ್ಲಿ ಸೋಮವಾರ ಘಟನೆ ನಡೆದಿದೆ. 15 ವರ್ಷದ ಬಾಲಕ ಚೇತನ ಕೊಲೆಯಾದವ. ಆರನೇ ತರಗತಿಯ 12 ನೇ ವರ್ಷದ ಬಾಲಕ ಮನೆಗೆ ಹೋಗಿ ಚಾಕು ತಂದು ಬಲವಾಗಿ ಇರಿದು ಕೊಲೆ ಮಾಡಿದ್ದಾನೆ.
ಚೇತನ್ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
6ನೇ ತರಗತಿ ಬಾಲಕನಿಗೆ ಕೊಲೆ ಮಾಡುವ ಮನಸ್ಥಿತಿ ಎನ್ನುವುದು ಆಘಾತಕಾರಿ ಸಂಗತಿ. ಕೊಲೆಯಾದ ಬಾಲಕ ಎಂಟನೇ ತರಗತಿ ಪಾಸಾಗಿದ್ದು, ತಂದೆ ತಾಯಿಗೆ ಒಬ್ಬನೇ ಮಗನಾಗಿದ್ದು, ಪೋಷಕರು ರೊಟ್ಟಿ ವ್ಯಾಪಾರ ಮಾಡಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಹೇಳಿದ್ದಾರೆ.
Comments are closed.