India: ಲಾಹೋರ್ ಸೇರಿ ಪಾಕಿಸ್ತಾನದ ಹಲವು ನಗರಗಳ ಮೇಲೆ ಭಾರತದ ದಾಳಿ – ತತ್ತರಿಸಿದ ಪಾಕ್

Share the Article

 

India : ಪಾಕಿಸ್ತಾನದ ಭಯೋತ್ಪಾದಕ ಅಡಗುತಾಣಗಳ ಮೇಲೆ ಭಾರತ ಆಪರೇಷನ್ ಸಿಂದೂರ್ ದಾಳಿ ನಡೆಸಿದ ಒಂದು ದಿನದ ನಂತರ ಪಾಕಿಸ್ತಾನ ಪ್ರತೀಕಾರವಾಗಿ ಜಮ ಮತ್ತು ಕಾಶ್ಮೀರದ ಮೇಲೆ ಎಂಟು ಕ್ಷಿಪಣಿಗಳನ್ನು ಹಾರಿಸಿ ದಾಳಿಗೆ ಯತ್ನಿಸಿದ್ದು, 8 ಕ್ಷಿಪಣಿಗಳನ್ನು ಭಾರತವು ಹೊಡೆದು ಉರುಳಿಸಿದೆ. ಈ ಬೆನ್ನಲ್ಲೇ ಲಾಹೋರ್ ಸೇರಿ ಪಾಕಿಸ್ತಾನದ ಹಲವು ನಗರಗಳ ಮೇಲೆ ಭಾರತ ದಾಳಿ ಮಾಡಿದೆ.

 

ಹೌದು, ಪಾಕಿಸ್ತಾನದ ಹಲವು ನಗರಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ. ಕೆಲವೇ ನಿಮಿಷಗಳ ಮೊದಲು ಭಾರತೀಯ ಸೇನೆ ಪಾಕಿಸ್ತಾನದ 3 ಎಡಬ್ಲ್ಯುಎಸಿಎಸ್‌ ಅನ್ನು ಧ್ವಂಸಗೊಳಿಸಿದೆ. ಪಾಕಿಸ್ತಾನದ ಲಾಹೋರ್, ಮುಲ್ತಾನ್, ಸರ್ಗೋಧಾ, ಫೈಸಲಾಬಾದ್‌ನಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದಂತೆ ಭಾರತ ವಾಯು ರಕ್ಷಣಾ ವ್ಯವಸ್ಥೆಗಳನ್ನು ನಾಶಪಡಿಸಿದೆ.

https://x.com/MithilaWaala/status/1920522237955670307?t=RHm0SYLncH7dt-iFshFPew&s=19

ಅಂದಹಾಗೆ ಭಾರತ ಇದೇ ಮೊದಲ ಬಾರಿಗೆ ಪಾಕಿಸ್ತಾನದ ರಾಜಧಾನಿಗೆ ಗುರಿಯಿಟ್ಟಿದೆ. ಮೊದಲ ಬಾರಿಗೆ ಇಸ್ಲಾಮಾಬಾದ್‌ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ. ಪಾಕಿಸ್ತಾನದ ಪ್ರಮುಖ 5 ನಗರಗಳ ಮೇಲೆ ಭಾರತ ದಾಳಿ ನಡೆಸಿದೆ. ಇಸ್ಲಮಾಬಾದ್, ಮುಲ್ತಾನ್, ಸರ್ಗೋದಾ, ಲಾಹೋರ್ ಮತ್ತು ಸಿಯಾಲ್‌ಕೋಟ್‌ನಲ್ಲಿ ಡ್ರೋನ್ ದಾಳಿ ನಡೆಸುವ ಮೂಲಕ ಪಾಕಿಸ್ತಾನದ ಆಕ್ರಮಣಕ್ಕೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ.

Comments are closed.