Karrnata GVt: SSLC, PUC ಪಾಸಿಂಗ್ ಮಾರ್ಕ್ ನಲ್ಲಿ ಬದಲಾವಣೆ!!

Karnataka Gvt: ಮಕ್ಕಳ ಭವಿಷ್ಯವನ್ನು ಮುಂದಿಟ್ಟುಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯನ್ನು ತರಲು ಮುಂದಾಗಿರುವ ರಾಜ್ಯ ಸರ್ಕಾರವು ಮುಂದಿನ ಶೈಕ್ಷಣಿಕ ವರ್ಷದಿಂದ, ಎಸ್‌ಎಸ್‌ಎಲ್‌ಸಿ (SSLC exam) ಹಾಗೂ ಪಿಯುಸಿ ಪರೀಕ್ಷೆಯಲ್ಲಿ (PUC exam) ಪಾಸಿಂಗ್ ಮಾರ್ಕ್ಸ್ (Passing marks) ಅನ್ನು ಈಗಿನ 35 ಅಂಕಗಳಿಂದ 33 ಅಂಕಕ್ಕೆ ಇಳಿಸಲು ಚಿಂತಿಸಿದೆ.
ಹೌದು, ವಿದ್ಯಾರ್ಥಿಗಳು ಉತ್ತೀರ್ಣರಾಗಲು ಸುಲಭವಾಗುವಂತೆ ಮಾಡುವುದು ಮತ್ತು ರಾಜ್ಯವನ್ನು ಇತರ ರಾಜ್ಯ ಪ್ರದೇಶಗಳಿಗೆ ಅನುಗುಣವಾಗಿ ತರುವುದನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಉತ್ತೀರ್ಣ ಅಂಕಗಳನ್ನು 35ರಿಂದ 33ಕ್ಕೆ ಇಳಿಸುವ ಬಗ್ಗೆ ಯೋಚಿಸುತ್ತಿದೆ.
ಇನ್ನು ಈ ಪ್ರಸ್ತಾವನೆಯನ್ನು ಸರ್ಕಾರಿ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ ಮತ್ತು ಮುಂಬರುವ 2025-26 ಶೈಕ್ಷಣಿಕ ವರ್ಷದಲ್ಲಿ ಇದನ್ನು ಜಾರಿಗೆ ತರಬಹುದು. ಈ ಬದಲಾವಣೆಯನ್ನು ಜಾರಿಗೆ ತರಲು ಶಿಕ್ಷಣ ಇಲಾಖೆ ಕಾನೂನು ರೂಪಿಸಲು ಸಿದ್ಧತೆ ನಡೆಸುತ್ತಿದೆ.
Comments are closed.