Crime: ಮನೆಕೆಲಸದಾಕೆಯಿಂದ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ! ಆರೋಪಿ ಮಹಿಳೆಯ ಬಂಧ!

Crime: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 28 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ಹೈದರಾಬಾದ್‌ನ ಜೂಬಿಲಿ ಹಿಲ್ಸ್‌ನಲ್ಲಿರುವ ಮನೆಯಲ್ಲಿ ಮನೆಗೆಲಸದಾಕೆಯಾಗಿ ಕೆಲಸ ಮಾಡುತ್ತಿದ್ದ ಈ ಮಹಿಳೆ, ತನ್ನ ಸಹೋದ್ಯೋಗಿಯ 17 ವರ್ಷದ ಮಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ.
ಈ ಘಟನೆಗೆ ಸಂಬಂಧಿಸಿದಂತೆ ಜೂಬಿಲಿ ಹಿಲ್ಸ್‌ನಲ್ಲಿರುವ ಮನೆಯೊಂದರಲ್ಲಿ ಮನೆಗೆಲಸದಾಕೆಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಬಾಲಕನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
ಏಪ್ರಿಲ್ 29 ರಂದು ಮಹಿಳೆ 17 ವರ್ಷದ ಬಾಲಕನಿಗೆ ಮುತ್ತಿಡುವುದನ್ನು ಮನೆಯ ವ್ಯವಸ್ಥಾಪಕರು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಬಾಲಕ ಮತ್ತು ಅವನ ತಾಯಿ ವಾಸಿಸುತ್ತಿದ್ದ ಕ್ವಾರ್ಟರ್ಸ್‌ನಲ್ಲಿ ಈ ಘಟನೆ ನಡೆದಿದೆ. ಈ ವಿಷಯ ತಿಳಿದ ತಕ್ಷಣ ಬಾಲಕನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆಯ ವಿರುದ್ಧ ಪೋಕ್ಸೊ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮನೆಯ ವ್ಯವಸ್ಥಾಪಕರು ನನಗೆ ಫೋನ್ ಮಾಡಿ ಈ ವಿಷಯ ತಿಳಿಸಿದರು. ಈ ಬಗ್ಗೆ ಮಹಿಳೆಯನ್ನು ಪ್ರಶ್ನಿಸಿದಾಗ, ಆ ಹುಡುಗ ತನ್ನ ತಮ್ಮನಂತೆ ಮತ್ತು ಪ್ರೀತಿಯಿಂದ ಮುತ್ತಿಟ್ಟಿದ್ದೇನೆ ಎಂದು ಹೇಳಿದ್ದಾಳೆ ಎಂದು 17ವರ್ಷದ ಬಾಲಕನ ತಾಯಿ ಹೇಳಿದ್ದಾರೆ. ಇನ್ನು ಮುಂದೆ ಇಂತಹ ವರ್ತನೆ ತೋರಿಸಬಾರದು ಎಂದು ಆಕೆಗೆ ಹೇಳಿದ್ದೇನೆ. ನನ್ನ ಮಗನನ್ನು ಈ ಬಗ್ಗೆ ಕೇಳಿದಾಗ ಅವನು ಗಳಗಳನೇ ಕಣ್ಣೀರಿಟ್ಟನು. ಆಗ ಆ ಮಹಿಳೆ ಹಲವು ಬಾರಿ ತನ್ನನ್ನು ಲೈಂಗಿಕವಾಗಿ ದೌರ್ಜನ್ಯ ಮಾಡಿದ್ದಾಳೆ. ಹಲವು ಬಾರಿ ನನ್ನ ಮೇಲೆ ಲೈಂಗಿಕ ಕ್ರಿಯೆಗಾಗಿ ಒತ್ತಾಯಿಸಿದ್ದಾಳೆ ಎಂದು ನನ್ನ ಮಗ ಹೇಳಿದ್ದಾನೆಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಈ ಮಹಿಳೆ ತನ್ನನ್ನು ಎರಡು ಬಾರಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದಳು. ಜೊತೆಗೆ ಲೈಂಗಿಕ ದೌರ್ಜನ್ಯದ ಬಗ್ಗೆ ಯಾರಿಗಾದರೂ ಹೇಳಿದರೆ, ನಿನ್ನ ಮೇಲೆ ಕಳ್ಳತನದ ಆರೋಪ ಹೊರಿಸುವುದಾಗಿ ಬೆದರಿಕೆ ಹಾಕಿದಳು ಎಂದು 17 ವರ್ಷದ ಬಾಲಕ ಹೇಳಿದ್ದಾನೆ. ಆದ್ದರಿಂದ ನಾನು ಈ ವಿಚಾರವನ್ನು ಯಾರ ಬಳಿಯೂ ಹೇಳಲಾಗದೇ ಅವರ ದೌರ್ಜನ್ಯವನ್ನು ಸಹಿಸಿಕೊಂಡಿದ್ದೆ ಎಂದು ಬಾಲಕ ಹೇಳಿದ್ದಾನೆ.
Comments are closed.