SSLC Result: ಎಸ್‌ಎಸ್‌ಎಲ್‌ಸಿ ಫಲಿತಾಂಶ; 22 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ, ಯಾರೆಲ್ಲ? ಲಿಸ್ಟ್ ಇಲ್ಲಿದೆ!

SSLC Result: 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಶೇ.66.1 ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕೆ 8% ಫಲಿತಾಂಶ ಹೆಚ್ಚಳವಾಗಿದ್ದು, ಬಾಲಕಿಯರೇ ಈ ಬಾರಿ ಮೇಲುಗೈ ಸಾಧಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ (91.12%) ಪಡೆದುಕೊಂಡಿದೆ. ಉಡುಪಿ ಜಿಲ್ಲೆ (89.96) ಎರಡನೇ ಸ್ಥಾನ ಪಡೆದುಕೊಂಡಿದೆ. ಉತ್ತರ ಕನ್ನಡ (83.19%) ಮೂರನೇ ಸ್ಥಾನ ಪಡೆದುಕೊಂಡಿದೆ.
SSLC ಫಲಿತಾಂಶದಲ್ಲಿ ಈ ಬಾರಿ ಹೆಣ್ಣು ಮಕ್ಕಳು ಶೇ.74ರಷ್ಟು ಪಾಸಾಗಿದ್ದು, ಗಂಡು ಮಕ್ಕಳು ಶೇ. 58,07 ರಷ್ಟು ಪಾಸಾಗಿದ್ದಾರೆ. ಹಾಗಾಗಿ ಈ ಬಾರಿ ಕೂಡಾ ಹೆಣ್ಣುಮಕ್ಕಳು ಮೇಲುಗೈ ಸಾಧಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ಶೇ.66.14 ರಷ್ಟು ಫಲಿತಾಂಶ ಬಂದಿದೆ. 22 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 625 ಕ್ಕೆ 625 ಅಂಕಗಳನ್ನು ಇವರು ಪಡೆದಿದ್ದಾರೆ.
625 ಅಂಕಗಳಿಗೆ 625 ಅಂಕ ಗಳಿಸಿರುವವರು ಅಖೀಲ್ ಅಹ್ಮದ್ ನದಾಫ್: ವಿಜಯಪುರ ಜಿಲ್ಲೆ ಸಿ. ಭಾವನಾ: ದೇವನಹಳ್ಳಿ
ಎಸ್.ಧನುಷ್: ಮೈಸೂರು ಜಿಲ್ಲೆಯ ಜೆ.ಧೃತಿ: ಮಂಡ್ಯ ಜಿಲ್ಲೆಯ ಎಸ್.ಎನ್.ಜಾಹ್ನವಿ: ಬೆಂಗಳೂರು ದಕ್ಷಿಣ ಮಧುಸೂಧನ್ ರಾಜ್: ಬೆಂಗಳೂರು ಉತ್ತರದ ಮೊಹಮ್ಮದ್ ಮಸ್ತೂರ್: ತುಮಕೂರು ಜಿಲ್ಲೆ ಮೌಲ್ಯ ಡಿ. ರಾಜ್: ಚಿತ್ರದುರ್ಗ ಜಿಲ್ಲೆ ಕೆ.ನಮನ: ಶಿವಮೊಗ್ಗ ಜಿಲ್ಲೆ ನಮಿತಾ: ಬೆಂಗಳೂರು ದಕ್ಷಿಣ ಜಿಲ್ಲೆ ನಂದನ್: ಚಿತ್ರದುರ್ಗ ಜಿಲ್ಲೆ ನಿತ್ಯ ಎಂ.ಕುಲಕರ್ಣಿ: ಶಿವಮೊಗ್ಗ ರಂಜಿತಾ: ಬೆಂಗಳೂರು ಗ್ರಾಮಾಂತರ ರೂಪಾ ಚೆನ್ನಗೌಡ ಪಾಟೀಲ್: ಬೆಳಗಾವಿ ಜಿಲ್ಲೆ ಸಹಿಷ್ಣು ಎನ್: ಶಿವಮೊಗ್ಗ ಜಿಲ್ಲೆ ಶಗುಫ್ತಾ ಅಂಜುಮ್: ಶಿರಸಿ ಸ್ವಸ್ತಿ ಕಾಮತ್: ಉಡುಪಿ ಜಿಲ್ಲೆ ಆರ್.ಎನ್.ತಾನ್ಯಾ: ಮೈಸೂರು ಜಿಲ್ಲೆ ಉತ್ಸವ್ ಪಾಟೀಲ್: ಹಾಸನ ಜಿಲ್ಲೆ ಯಶ್ವಿತಾ ರೆಡ್ಡಿ ಕೆ.ಬಿ: ಮಧುಗಿರಿಯ ಎಂ.ಧನಲಕ್ಷ್ಮೀ
Comments are closed.