Vijay Deverakonda: ನಟ ವಿಜಯ್‌ ದೇವರಕೊಂಡ ಮೇಲೆ FIR ದಾಖಲು!

Share the Article

Vijay Deverakonda: ಬುಡಕಟ್ಟು ಸಮುದಾಯಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ನಟ ವಿಜಯ್‌ ದೇವರಕೊಂಡ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಬಗ್ಗೆ ತಮ್ಮ ಭಾಷಣದ ಸಮಯದಲ್ಲಿ ಬುಡಕಟ್ಟು ಸಮುದಾಯಗಳ ನಡುವಿನ ಶತಮಾನಗಳಷ್ಟು ಹಳೆಯ ಸಂಘರ್ಷಗಳಿಗೆ ಹೋಲಿಸಿದ್ದಾರೆ ಎಂದು ಆರೋಪಿಸಿ ಎಸ್‌ಆರ್‌ ನಗರ ಪೊಲೀಸ್‌ ಠಾಣೆಯಲ್ಲಿ ಗುರುವಾರ ದೂರು ದಾಖಲು ಮಾಡಲಾಗಿದೆ.

ನಟ ಈ ಕೂಡಲೇ ಕ್ಷಮೆಯಾಚಿಸಬೇಕು ಎಂದು ಬುಡಕಟ್ಟು ಸಂಘಗಳು ಒತ್ತಾಯ ಮಾಡಿದೆ.

ಹೈದರಾಬಾದ್‌ ವಕೀಲ ಲಾಲ್‌ ಚೌಹಾಣ್‌ ಅವರು ಸೂರ್ಯ ಅವರ ʼರೆಟ್ರೊʼ ಚಿತ್ರದ ಬಿಡುಗಡೆ ಪೂರ್ವ ಸಮಾರಂಭದಲ್ಲಿ ವಿಜಯ್‌ ನೀಡಿದ ಹೇಳಿಕೆಗಳ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.

Comments are closed.