Madhu Bangarappa: ISC-12ನೇ ತರಗತಿ ಪರೀಕ್ಷೆಯಲ್ಲಿ ಫಸ್ಟ್ ರ್ಯಾಂಕ್ ಪಡೆದ ಸಚಿವ ಮಧುಬಂಗಾರಪ್ಪ ಪುತ್ರ!

Madhu Bangarappa: ಐಎಸ್‌ಸಿ 12 ನೇ ತರಗತಿಯ ಪರೀಕ್ಷೆಯಲ್ಲಿ ಸಚಿವ ಮಧು ಬಂಗಾರಪ್ಪ ಅವರ ಪುತ್ರ 98.25% ಅಂಕ ಗಳಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಧು ಬಂಗಾರಪ್ಪ ಪೋಸ್ಟ್ ಹಂಚಿಕೊಂಡಿದ್ದಾರೆ.
” ನನ್ನ ಮಗ, ಸೂರ್ಯ ಮಧು ಬಂಗಾರಪ್ಪ ಐಸಿಎಸ್ಸಿ 12 ನೇ ತರಗತಿಯ ಪರೀಕ್ಷೆಯಲ್ಲಿ 98.25% ಅಂಕ ಗಳಿಸಿ ವಿಜ್ಞಾನ ವಿಭಾಗದಲ್ಲಿ ಮೊದಲನೇ ರ್ಯಾಂಕ್ ಪಡೆದಿದ್ದಾನೆ ಎಂದು ತಿಳಿಸಲು ನನಗೆ ಅತೀವ ಸಂತೋಷವಾಗುತ್ತಿದೆ. ಇದು ಅವನ ಶ್ರಮ ಸಮರ್ಪಣೆ ಮತ್ತು ದೃಢ ಸಂಕಲ್ಪಕ್ಕೆ ಸಿಕ್ಕಿರುವ ಫಲ. ಅವನ ಈ ಸಾಧನೆಗೆ ನಾನು ಹೆಮ್ಮೆಪಡುತ್ತೇನೆ ಮತ್ತು ಅವನ ಉಜ್ವಲ ಭವಿಷ್ಯಕ್ಕಾಗಿ ಹಾರೈಸುತ್ತೇನೆ. ಹಾಗೂ ಮಾರ್ಗದರ್ಶನ ನೀಡಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳಿಗೆ ಧನ್ಯವಾದಗಳುʼ ಎಂದು ಬರೆದಿದ್ದಾರೆ. ʼ
Comments are closed.