LKG – UKG: ಒಂದನೇ ತರಗತಿಯ ದಾಖಲಾತಿ ವಯಸ್ಸಿನ ಮಿತಿ ಸಡಿಲಿಕೆ ಎಲ್‌ಜಿ-ಯುಕೆಜಿಗೆ ಅನ್ವಯವಾಗುವುದಿಲ್ಲ!

Share the Article

LKG – UKG: 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯ ಆಗುವಂತೆ ಒಂದನೇ ತರಗತಿಗೆ ದಾಖಲಾತಿ ವಯಸ್ಸಿನ ಮಿತಿ ಸಡಿಲ ಮಾಡಲಾಗಿದ್ದು, ಆದ್ರೆ ಈ ಮಿತಿ ಎಲ್‌ಕೆಜಿ-ಯುಕೆಜಿಗೆ (LKG – UKG) ಅನ್ವಯವಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟನೆ ನೀಡಿದೆ.

ಇತ್ತೀಚಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಒಂದನೇ ತರಗತಿ ದಾಖಲಾತಿ ಮಿತಿಯನ್ನು 5 ವರ್ಷ 5 ತಿಂಗಳಿಗೆ ಕಡಿತ ಮಾಡಿ ಆದೇಶ ಮಾಡಿದ್ದು, ಈ ಆದೇಶ ಎಲ್‌ಕೆಜಿ-ಯುಕೆಜಿ ಮಕ್ಕಳ ದಾಖಲಾತಿಗೆ ಗೊಂದಲ ಉಂಟು ಮಾಡಿಸಿತ್ತು. ಹೀಗಾಗಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಿಕ್ಷಣ ಇಲಾಖೆ ವಯಸ್ಸಿನ ಮಿತಿ ಸಡಿಲ ಒಂದನೇ ತರಗತಿಗೆ ಈ ವರ್ಷಕ್ಕೆ ಮಾತ್ರ ಅನ್ವಯ. 2025-26ನೇ ಸಾಲಿಗೆ ಎಲ್‌ಕೆಜಿ-ಯುಕೆಜಿಗೆ ದಾಖಲಾತಿ ಆಗುವ ಮಕ್ಕಳಿಗೆ ಈ ನಿಯಮ ಅನ್ವಯ ಇಲ್ಲ. ಎಲ್‌ಕೆಜಿಗೆ ದಾಖಲಾಗಲು 4 ವರ್ಷ, ಯುಕೆಜಿಗೆ ದಾಖಲಾಗಲು 5 ವರ್ಷ ಕಡ್ಡಾಯವಾಗಿ ತುಂಬಿರಬೇಕು ಎಂದು ಆದೇಶ ಹೊರಡಿಸಿದೆ.

Comments are closed.