Udupi: ಪಾಕ್ ಜೊತೆ ಯುದ್ಧ ಮೋದಿ ನಿರ್ಧರಿಸಲಿ-ಸುಗುಣೇಂದ್ರ ಶ್ರೀ

Udupi: ಪಾಕಿಸ್ತಾನದ ಜತೆಯುದ್ಧ ಬೇಕೋ, ಬೇಡವೋ ಎನ್ನುವುದು ಪ್ರಧಾನಿ, ರಕ್ಷಣಾ ಮಂತ್ರಿಗಳು ತೆಗೆದುಕೊಳ್ಳಬೇಕಾದ ನಿರ್ಧಾರ. ಅದರ ಹಿನ್ನೆಲೆಗಳು ನಮಗೆ ಗೊತ್ತಿಲ್ಲದ ಕಾರಣ ಯುದ್ಧ ಬೇಕೋ ಬೇಡವೋ ಎಂದು ನಾವು ಹೇಳುವುದಕ್ಕಾ ಗುವುದಿಲ್ಲ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಪಹಲ್ಗಾಂ ಘಟನೆಯಿಂದ ನೋವಾಯಿತು, ಇದುವರೆಗೆ ಧರ್ಮವನ್ನು ನೋಡಿ ಭಯೋತ್ಪಾದನೆ ಆಗುತ್ತಿರಲಿಲ್ಲ. ಈಗ ಧರ್ಮವನ್ನು ಕೇಳಿ ಕೊಲ್ಲುತ್ತಿದ್ದಾರೆ. ನೀವು ಹಿಂದೂವಾ ಎಂದು ಕೇಳಿ ಭಯೋತ್ಪಾದನೆ ನಡೆಸಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಕಾಶ್ಮೀರದಲ್ಲಿ ಭದ್ರತೆ ಹೆಚ್ಚಿಸುವುದಕ್ಕೆ ಪ್ರಥಮ ಪ್ರಾಶಸ್ತ್ರ, ಶಾಂತಿಯಿಂದ ಪರಿಹಾರ ಆಗುವುದು ಎಷ್ಟು ಮುಖ್ಯವೋ ಶಾಶ್ವತ ಪರಿಹಾರ ಕೊಡ ಅಷ್ಟೇ ಮುಖ್ಯ ಎಂದರು.
Comments are closed.