Central Gvt: ಪಾಕಿಸ್ತಾನಕ್ಕೆ ‘ಜಲ ಬಾಂಬ್’ ಹಾಕಿದ ಭಾರತ !!

Central Gvt: ಕಾಶ್ಮೀರದಲ್ಲಿ ಪಹಲ್ಗಾಮ್ ಉಗ್ರರು ಅಮಾಯಕರನ್ನು ಬಲಿ ಪಡೆದು ಅಟ್ಟಹಾಸ ಮೆರೆದ ಬೆನ್ನಲ್ಲೇ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭದ್ರತಾ ಸಂಪುಟದ ಸಭೆ ನಡೆದಿದ್ದು ಪಾಕಿಸ್ತಾನದ ಮೇಲೆ ‘ಜಲಬಾಂಬ್’ ಶಾಕ್ ಕೊಡಲು ತೀರ್ಮಾನಿಸಲಾಗಿದೆ.
ಹೌದು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲ್ಲಿಯೇ ಭಾರತ ಸರ್ಕಾರ ಇಂದು ನಡೆದ ಭದ್ರತಾ ಸಂಪುಟ ಸಭೆಯಲ್ಲಿ ಅತ್ಯಂತ ಮಹತ್ವದ ನಿರ್ಧಾರ ಕೈಗೊಂಡಿದ್ದು ಪಾಕಿಸ್ತಾನದ ಜೊತೆಗೆ 1960 ರಿಂದಲೂ ಇದ್ದ ಸಿಂಧೂ ನದಿ ಒಪ್ಪಂದವನ್ನೇ ಸಸ್ಪೆಂಡ್ ಮಾಡುವ ನಿರ್ಧಾರ ಮಾಡಿದೆ.
ಪಾಕಿಸ್ತಾನದ ಪಾಲಿಗೆ ಇಂಡಸ್ ಅಥವಾ ಸಿಂಧೂ ಕೇವಲ ನದಿಯಲ್ಲ. ಜೀವನದಿ. ಸಿಂಧೂ ನದಿ ಇಲ್ಲದೆ ಪಾಕಿಸ್ತಾನದ ಜನಜೀವನವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಇಲ್ಲಿಯವರೆಗೂ ಪಾಕ್ ಪ್ರಾಯೋಜಿತ ಭಯೋತ್ಪಾದನೆಗಳಾದ ಬಳಿಕ ಅಲ್ಲಿನ ನಾಗರೀಕರ ಬಗ್ಗೆ ಕನಿಕರ ತೋರುತ್ತಿದ್ದ ಭಾರತ ಸಿಂಧೂ ನದಿ ಒಪ್ಪಂದವನ್ನು ಮುಂದುವರಿಸಿತ್ತು. ಆದರೆ ಇದೀಗ ಪಾಕಿಸ್ತಾನ ಪದೇ ಪದೇ ಬಾಲ ಬಿಚ್ಚುತ್ತಿರುವ ಕಾರಣ ಇದೀಗ ಈ ಒಪ್ಪಂದಕ್ಕೆ ಬ್ರೇಕ್ ಹಾಕಲು ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.
Comments are closed.