Bengaluru: ವಿದೇಶಕ್ಕೆ ರಫ್ತುಗಾಗಬೇಕಿದ್ದ ಕೂದಲು ಕಳ್ಳತನ!

Bengaluru: ರಾಜಧಾನಿ ಬೆಂಗಳೂರು (Bengaluru) ಹೊರವಲಯದ ಸೋಲದೇವನಹಳ್ಳಿ ಬಳಿಯ ಲಕ್ಷ್ಮೇಪುರ ಕ್ರಾಸ್‌ನಲ್ಲಿರುವ ಕೂದಲು ದಾಸ್ತಾನು ಗೋದಾಮಿಗೆ ನುಗ್ಗಿದ ಖದೀಮರು, ಸುಮಾರು ₹70 ಲಕ್ಷ ಮೌಲ್ಯದ 850 ಕೆ.ಜಿ. ತಲೆಗೂದಲು ಕಳವು ಮಾಡಿರುವ ಘಟನೆ ನಿಜಕ್ಕೂ ಅಚ್ಚರಿಯೂ, ಆಘಾತಕಾರಿಯೂ ಆಗಿದೆ. ಚೀನಾ, ಬರ್ಮಾ ಮತ್ತು ಹಾಂಗ್‌ಕಾಂಗ್‌ಗೆ ರಫ್ತು ಮಾಡಲು ಸಿದ್ಧಪಡಿಸಿದ್ದ ಈ ಕೂದಲುಗಳನ್ನು ಫೆಬ್ರವರಿ 28ರಂದು ದೋಚಲಾಗಿತ್ತು.
ಪೊಲೀಸರ ತನಿಖೆಯಲ್ಲಿ ಪ್ರಮುಖ ಆರೋಪಿ, ಗದಗ ಮೂಲದ ಯಲ್ಲಪ್ಪ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತನಿಂದ ₹18 ಲಕ್ಷ ಮೌಲ್ಯದ 300 ಕೆ.ಜಿ. ತಲೆಗೂದಲು ವಶಪಡಿಸಿಕೊಳ್ಳಲಾಗಿದೆ. ಐದು ಮಂದಿ ಸಹಚರ ಆರೋಪಿಗಳು ಈ ತನಕ ಪತ್ತೆಯಾಗದೇ, ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.