Amethi: ಮದುವೆ ದಿಬ್ಬಣ ಹೋಗುತ್ತಿದ್ದ ಕಾರಿನಿಂದ ಇಳಿದು ಗೂಡ್ಸ್ ರೈಲಿಗೆ ತಲೆ ಕೊಟ್ಟ ವರ!

Amethi: ಮದುವೆ ದಿಬ್ಬಣದ ಹೋಗುತ್ತಿದ್ದ ವೇಳೆ ದಾರಿ ಮಧ್ಯೆ ಕಾರು ನಿಲ್ಲಿಸಿದ ವರನೊಬ್ಬ ಪಕ್ಕದಲ್ಲೇ ಬರುತ್ತಿದ್ದ ರೈಲಿನಡಿಗೆ ಜಿಗಿದು ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಘಟನೆ ಅಮೇಥಿ ಜಿಲ್ಲೆಯ ಗೌರಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರವಿ (30) ಆತ್ಮಹತ್ಯೆಗೆ ಶರಣಾದ ವರ.
ವಿವಾಹದ ಮೆರವಣಿಗೆ ಶುಕ್ರವಾರ ಸಂಜೆ ಅಜಂಗಢಕ್ಕೆ ಹೋಗುತ್ತಿದ್ದು, ಈ ಸಂದರ್ಭದಲ್ಲಿ ಗೌರಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾನಿ ರೈಲು ನಿಲ್ದಾಣದ ಬಳಿ ರವಿ ಕಾರು ನಿಲ್ಲಿಸಿ ರೈಲು ಹಳಿಯ ಬಳಿ ಹೋಗಿದ್ದು, ಗೂಡ್ಸ್ ರೈಲಿನ ಮುಂದೆ ಜಿಗಿದು ಪ್ರಾಣ ಕಳೆದುಕೊಂಡಿದ್ದಾನೆ.
ಮದುಮಗಳ ಮನೆಯವರು ವರನ ದಿಬ್ಬಣ ಬರುವುದನ್ನೇ ಕಾಯುತ್ತಿದ್ದು, ವರ ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದು ಶಾಕ್‌ಗೊಳಗಾಗಿದ್ದಾರೆ.
ವರನ ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
Comments are closed.