Viral Photo : ಆಕಾಶದಲ್ಲಿ ಹಾರುವಾಗ ಹಕ್ಕಿಯ ಹೊಟ್ಟೆ ಸೀಳಿ ಹೊರಬಂದ ಮೀನು !!

Share the Article

Viral Photo : ಪಕ್ಷಿಗಳು ಹುಳ ಉಪಟಗಳೊಂದಿಗೆ ಮೀನುಗಳನ್ನು ಕೂಡ ಆಹಾರವಾಗಿ ಸೇವಿಸುವುದು ನೈಸರ್ಗಿಕ ನಿಯಮ. ಅಂತೀಯ ಇನ್ನೊಂದು ಪಕ್ಷಿ ಮೀನನ್ನು ನುಂಗಿ ಆಕಾಶದಲ್ಲಿ ಹಾರಾಟ ನಡೆಸುವಾಗ ಆ ಹಕ್ಕಿಯ ಹೊಟ್ಟೆಯನ್ನು ಸೀಳಿ ಮೀನು ಹೊರಬಂದ ಅಪರೂಪದ ಘಟನೆ ಒಂದು ನಡೆದಿದೆ. ಈ ಕುರಿತಾದ ಫೋಟೋ ಒಂದು ವೈರಲ್ ಆಗಿದೆ.

ಇದೀಗ ವೈರಲ್ ಆಗಿರುವ ಫೋಟೋದಲ್ಲಿ ಹೆರಾನ್ ಹಕ್ಕಿ (heron bird ) ಯೊಂದು ಈಲ್ ಮೀನ (eel fish) ನ್ನು ತಿಂದು ಆಕಾಶಕ್ಕೆ ಹಾರಿದ್ದು, ಆದರೆ ಈ ಮೀನು ಹಕ್ಕಿಯ ಹೊಟ್ಟೆಯನ್ನು ಸೀಳಿ ಹೊರ ಬಂದಿರುವ ಫೋಟೋ ವೈರಲ್ ಆಗಿದೆ. ಹೌದು, ಈ ಫೋಟೋದಲ್ಲಿ ಹಕ್ಕಿ ತನ್ನ ಎರಡು ಕಾಲುಗಳನ್ನು ಹಿಂದಕ್ಕೆ ಎತ್ತಿ ಆಕಾಶದಲ್ಲಿ ಹಾರುತ್ತಿದೆ. ಈ ವೇಳೆಯಲ್ಲಿ ಅದರ ಹೊಟ್ಟೆಯನ್ನು ಸೀಳಿ ಈಲ್ ಮೀನು ಹೊರಬರುತ್ತಿರುವುದನ್ನು ನೋಡಬಹುದು. ಈ ಫೋಟೋಗೆ ಬಳಕೆದಾರರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Nature is Amazing ಹೆಸರಿನ ಖಾತೆಯಲ್ಲಿ ಈ ಫೋಟೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ಫೋಟೋದೊಂದಿಗೆ ಹೆರಾನ್ ಹಕ್ಕಿಯೊಂದು ಆಕಾಶದಲ್ಲಿ ಹಾರುತ್ತಿರವಾಗಲೇ ಈಲ್ ಮೀನೊಂದು ಅದರ ಹೊಟ್ಟೆ ಸೀಳಿ ಹೊರ ಬಂದ ಅದ್ಭುತ ಕ್ಷಣವನ್ನು ಛಾಯಾಗ್ರಾಹಕರೊಬ್ಬರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

Comments are closed.