Sperm Race: ವಿಶ್ವದಲ್ಲೇ ಮೊದಲ ಬಾರಿಗೆ ವೀರ್ಯಾಣುಗಳ ಓಟದ ಸ್ಪರ್ಧೆ ಆಯೋಜನೆ!

Sperm Race: ಓಟದ ಸ್ಪರ್ಧೆಯ ಕುರಿತು ನೀವು ನಿಮ್ಮ ಬಾಲ್ಯದಲ್ಲಿ ಆಡಿರುವ ಕುರಿತು ನಿಮಗೆ ಗೊತ್ತೇ ಇದೆ. ಆದರೆ ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಲಾಸ್ ಏಂಜಲೀಸ್‌ನ ಸ್ಟಾರ್ಟಪ್ ಒಂದು ವೀರ್ಯಾಣುಗಳ ಸ್ಪರ್ಧೆ ನಡೆಸುತ್ತಿದೆ.
ಸಿನೆಮಾ, ಮೀಮ್‌ಗಳಲ್ಲಿ ಬಳಕೆ ಮಾಡುತ್ತಿದ್ದ ಈ “ವೀರ್ಯಾಣು ಓಟʼ ದ ಪರಿಕಲ್ಪನೆಯನ್ನು ʼಟ್ರೇಡೆಡ್ʼ ಸಂಸ್ಥೆಯು ಇದನ್ನು ಮಾಡ ಹೊರಟಿದೆ. ಈ ಸ್ಪರ್ಧೆಗೆ ಸಂಸ್ಥೆ 8.5 ಕೋಟಿ ರೂ (1 ಮಿಲಿಯನ್ ಡಾಲರ್) ಗಳಷ್ಟು ಹಣ ಸಂಗ್ರಹ ಮಾಡಿದೆ. ಪುರುಷರಲ್ಲಿ ಫಲವತ್ತತೆ ಪ್ರಮಾಣ ಕಡಿಮೆಯಾಗುತ್ತಿದ್ದು, ಸಂತಾನೋತ್ಪತ್ತಿ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಆರೋಗ್ಯದ ಬಗ್ಗೆ ತಿಳುವಳಿಕೆ ನೀಡುವುದು ಈ ಸ್ಪರ್ಧೆಯ ಉದ್ದೇಶ ಎಂದು ಸಂಸ್ಥೆ ಹೇಳಿಕೆ ನೀಡಿದೆ.
Comments are closed.