Gang rape: ಎಂಬಿಬಿಎಸ್ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ : ಮೂವರು ಕಾಮುಕರು ಅರೆಸ್ಟ್!

Share the Article

 

Gang rape: ಕುಡಿದ ಮತ್ತಿನಲ್ಲಿ 22 ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿನಿ ಮೇಲೆ ಇಬ್ಬರು ಸಹಪಾಠಿಗಳು ಹಾಗೂ ಓರ್ವ ಸ್ನೇಹಿತ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ.

 

ಮೇ. 18 ರಂದು ಮಧ್ಯರಾತ್ರಿ ಸಿನೆಮಾ ನೋಡಲು ಯುವತಿ ತನ್ನ ಸ್ನೇಹಿತರ ಜೊತೆ ತೆರಳಿದ್ದಳು. ನಂತರ ಯುವತಿಯನ್ನು ಖಾಸಗಿ ಪ್ಲಾಟ್ ಗೆ ಕರೆದೊಯ್ದಿದ್ದು, ಯುವತಿಗೆ ಪಾನೀಯದಲ್ಲಿ ಮಾತ್ರೆ ಕೊಟ್ಟು ಪ್ರಜ್ಞೆ ತಪ್ಪಿದ ನಂತರ ಮೂವರಿಂದ ಅತ್ಯಾಚಾರ (Gang rape) ಎಸಗಿರುವ ಆರೋಪ ಕೇಳಿಬಂದಿದೆ.

 

ಪ್ರಜ್ಞೆ ಬಂದ ನಂತರ ಯುವತಿ ಬೆಳಗಾವಿಯ ತಮ್ಮ ಮನೆಯವರಿಗೆ ಘಟನೆ ಕುರಿತು ವಿವರಿಸಿದ ನಂತರದಲ್ಲಿ ಸಾಂಗ್ಲಿಯ ವಿಶ್ರಂಬಾಗ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪುಣೆ, ಸೋಲಾಪುರ ಮತ್ತು ಸಾಂಗಲಿ ಮೂಲದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ನ್ಯಾಯಾಲಯ ಮೇ. 27 ರ ವರೆಗೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

 

ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸದ್ಯ ಯುವತಿಯನ್ನು ಪೋಷಕರ ವಶಕ್ಕೆ ನೀಡಲಾಗಿದೆ. ಅರೋಗ್ಯ ತಪಾಸಣೆ ಯನ್ನು ಸಹ ನಡೆಸಲಾಗಿದೆ.

Comments are closed.