Mysore : ಹಣ ನೀಡುವುದಾಗಿ ನಂಬಿಸಿ ವಿದ್ಯಾರ್ಥಿನಿಯರಿಂದ ಅಶ್ಲೀಲ ಫೋಟೋ, ವಿಡಿಯೋ ಪಡೆದು ದುರ್ಬಳಕೆ !!

Mysore : ಹಣ ನೀಡುವುದಾಗಿ ನಂಬಿಸಿ ಕಾಲೇಜು ವಿದ್ಯಾರ್ಥಿನಿಯರ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಪಡೆದು ದುರ್ಬಳಕೆ ಮಾಡುತ್ತಿರುವ ಜಾಲವೊಂದು ಮೈಸೂರಿನಲ್ಲಿ ಪತ್ತೆಯಾಗಿದೆ.

ಹೌದು, ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ 12 ವರ್ಷದ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ಖಿನ್ನತೆಗೆ ಒಳಗಾದ ಸಂದರ್ಭದಲ್ಲಿ ಪೋಷಕರು ವಿಚಾರಣೆ ನಡೆಸಿದ್ದಾರೆ. ಆಗ ನಿಜಾಂಶ ಬಯಲಾಗಿ ತಂದೆ ನರಸಿಂಹರಾಜ ಠಾಣೆಗೆ ಈ ಬಗ್ಗೆ ದೂರು ನೀಡಿದ್ದು, ಓರ್ವ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರ್ಥಿನಿ ಹೇಳಿದ್ದೇನು?
ಮೂರು ತಿಂಗಳ ಹಿಂದೆ ಪರಿಚಯವಾದ ಮಹಿಳೆ ನನ್ನನ್ನು ಪುಸಲಾಯಿಸಿ ಕಾಳಿದಾಸ ರಸ್ತೆಯ ಕೆಫೆಗೆ ಆಗಾಗ ಕರೆದುಕೊಂಡು ಹೋಗುತ್ತಿದ್ದರು. ಶ್ರೀಮಂತರ ಪರಿಚಯ ನನಗಿದ್ದು, ಅವರು ನಿನಗೆ ಕೈ ತುಂಬಾ ಹಣ ಕೊಡುತ್ತಾರೆ. ನಾಲ್ಕೈದು ವರ್ಷಗಳಿಂದ ಹಲವು ವಿದ್ಯಾರ್ಥಿಗಳಿಗೆ ಈ ರೀತಿ ಹಣ ಕೊಡಿಸಿದ್ದೇನೆ ಎಂದು ನಂಬಿಸಿದ್ದಾಳೆ. 15 ಸಾವಿರ ರೂ.ಗಳನ್ನು ಕೊಟ್ಟಿದ್ದು, ಫೋಟೋ ಮತ್ತು ವಿಡಿಯೋಗಳನ್ನು ಬೇರೆ ಯಾರಿಗೂ ಕಳುಹಿಸುವುದಿಲ್ಲ ಎಂದಿದ್ದರಿಂದ ನಾನು ವ್ಯಕ್ತಿಯೊಬ್ಬರ ಸ್ನ್ಯಾಪ್ ಖಾತೆಗೆ ಫೋಟೋ ಮತ್ತು ವಿಡಿಯೋ ಕಳುಹಿಸಿದ್ದಾಗಿ ಪುತ್ರಿ ತಿಳಿಸಿದ್ದಾಳೆ.
ಈ ಕುರಿತಾಗಿ ಆಕೆಯ ತಂದೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
Comments are closed.