ವಿಮಾನ ಹಾರಾಟ ನಡೆಸಿದ ಸ್ವಲ್ಪ ಸಮಯದ ನಂತರ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಪೈಲಟ್ ನಿಧನ!

Share the Article

ನವದೆಹಲಿ: ಶ್ರೀನಗರದಿಂದ ವಿಮಾನ ಹಾರಾಟ ನಡೆಸಿದಸ್ವ ಲ್ಪ ಸಮಯದ ನಂತರ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಪೈಲಟ್ ಬುಧವಾರ ದೆಹಲಿಯಲ್ಲಿ ನಿಧನ ಹೊಂದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ವಿಮಾನ ಹಾರಾಟದ ಸಮಯದಲ್ಲಿ ಪೈಲಟ್ ಮರಣ ಹೊಂದಿದ್ದರೆ ದುರಂತವೇ ನಡೆದು ಹೋಗುತ್ತಿತ್ತು. ದೊಡ್ಡ ಅವಘಡ ತಪ್ಪಿದೆ ಎನ್ನಲಾಗುತ್ತಿದೆ.

ಗುರುವಾರ ವಿಮಾನಯಾನ ಸಂಸ್ಥೆಯ ವಕ್ತಾರರು ಹೇಳಿಕೆಯೊಂದರಲ್ಲಿ ಪೈಲಟ್ ನಿಧನಕ್ಕೆ ವಿಷಾದ ವ್ಯಕ್ತಪಡಿಸಿದ್ದು, ವೈದ್ಯಕೀಯ ಸ್ಥಿತಿಯಿಂದಾಗಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಿದ್ದಾರೆ.

ವಿಮಾನಯಾನ ಸಂಸ್ಥೆಯು ಅಧಿಕಾರಿಗಳಿಗೆ ಎಲ್ಲರೂ ಗೌಪ್ಯತೆಯನ್ನು ಗೌರವಿಸಬೇಕೆಂದು ವಕ್ತಾರರು ವಿನಂತಿಸಿಕೊಂಡಿದ್ದಾರೆ. ಅನಗತ್ಯ ಊಹಾಪೋಹಗಳನ್ನು ತಪ್ಪಿಸುವಂತೆ ನಾವು ವಿನಂತಿಸುತ್ತೇವೆ ಎಂದಿದ್ದು ಆರೋಗ್ಯ ಸಮಸ್ಯೆಗಳಿಂದ ಈ ಸಾವಾಗಿದೆ ಎನ್ನಲಾಗಿದೆ.

Comments are closed.