Chennai: ಜಿಮ್‌ನಲ್ಲಿ ನೀಡಿದ ಸಪ್ಲಿಮೆಂಟರಿ ಪ್ರೊಟೀನ್‌ ಸೇವನೆ; ಯುವಕ ಸಾವು

Chennai: ಚೆನ್ನೈನ ಕಾಸಿಮೇಡು ಜೀವರತ್ನಂ ನಗರದ ನಿವಾಸಿ ಸಾವಿಗೀಡಾಗಿರುವ ಘಟನೆ ನಡೆದಿದೆ. ಇವರು ಕಾಲಡಿಪೇಟೆಯಲ್ಲಿರುವ ಜಿಮ್‌ನಲ್ಲಿ ಆರು ತಿಂಗಳಿನಿಂದ ತೀವ್ರ ವ್ಯಾಯಾಮ ಮಾಡುತ್ತಿದ್ದು, ದೇಹವನ್ನು ಸದೃಢಗೊಳಿಸಲು ತರಬೇತುದಾರರ ಸಲಹೆಯ ಮೇರೆಗೆ ಉತ್ತೇಜಕ ಔಷಧಿಯನ್ನು ಚುಚ್ಚುಮದ್ದಿನ ಮೂಲಕ ತೆಗೆದುಕೊಳ್ಳುತ್ತಿದ್ದರು ಎಂದು ವರದಿಯಾಗಿದೆ.

ರಾಮ್‌ಕಿ (35 ವರ್ಷ) ಸಾವಿಗೀಡಾದ ಯುವಕ.

ಕಳೆದ ಎರಡು ದಿನಗಳ ಹಿಂದೆ ರಾಮ್‌ಕಿ ಗೆ ಆರೋಯ ಸಮಸ್ಯೆ ಕಾಣಿಸಿಕೊಂಡಿದೆ. ಇದರಿMದ ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಹಲವು ಪರೀಕ್ಷೆ ಮಾಡಿದಾಗ ರಾಮ್‌ಕಿ ಮೂತ್ರಪಿಂಡಗಳು ಹಾನಿಗೊಳಗಾಗಿರುವುದು ಕಂಡು ಬಂದಿದೆ. ಈ ಕುರಿತು ವೈದ್ಯರು ಕುಟುಂಬದವರಿಗೆ ತಿಳಿಸಿದರು.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಆದರೆ ನಂತರ ಚಿಕಿತ್ಸೆ ಫಲಿಸದೇ ರಾಮ್‌ಕಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಚೆನ್ನಾಗಿಯೇ ಇದ್ದ ಮಗ ಇದ್ದಕ್ಕಿದ್ದಂತೆ ಹಠಾತ್‌ ಸಾವಿಗೀಡಾಗಿದ್ದನ್ನು ಕುಟುಂಬದವರು ಅರಗಿಸಿಕೊಳ್ಳಲಾಗದೇ ಶಾಕ್‌ಗೊಳಗಾದರು. ಘಟನೆಯ ನಂತರ ರಾಮ್‌ಕಿ ಕುಟುಂಬದವರು ಪೊಲೀಸ್‌ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ಇದರಲ್ಲಿ ತಪ್ಪು ಔಷಧಿಯನ್ನು ಶಿಫಾರಸು ಮಾಡಿದ ಜಿಮ್‌ ತರಬೇತುದಾರನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿ ಪ್ರತಿಭಟನೆ ನಡೆಸಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು.

ನಂತರ ಪೊಲೀಸರು ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ, ತನಿಖೆ ಮಾಡುತ್ತಿದ್ದಾರೆ. ರಾಮ್‌ಕಿ ಅವರಿಗೆ ಇಬ್ಬರು ಮಕ್ಕಳಿದ್ದು, ಹೆಂಡತಿಯ ಜೊತೆ ಭಿನ್ನಾಭಿಪ್ರಾಯದಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ ಎಂದು ವರದಿ ಆಗಿದೆ.

Comments are closed.