Headless Chicken: ತಲೆ ಕತ್ತರಿಸಿದರು 18 ತಿಂಗಳು ಬದುಕಿದ ಕೋಳಿ!!

Headless Chicken: ಮನುಷ್ಯನಾಗಲಿ ಅಥವಾ ಯಾವುದೇ ಪ್ರಾಣಿಯಾಗಲಿ ತಲೆ ಇಲ್ಲದೆ ಬದುಕಲು ಸಾಧ್ಯವಿಲ್ಲ. ತಲೆಯೇ ಇಲ್ಲ ಎಂದ ಮೇಲೆ ನಿಮಿಷದಲ್ಲಿ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ. ಆದರೆ ಅಚ್ಚರಿ ವಿಚಾರ ಏನೆಂದರೆ ಇನ್ನೊಂದು ಕೋಳಿ ತಲೆ ಕತ್ತರಿಸಿದ ಬಳಿಕವು ಬರೋಬ್ಬರಿ 18 ತಿಂಗಳುಗಳ ಕಾಲ ಬದುಕಿದೆ. ಹೌದು ಇದು ಅಚ್ಚರಿಯೆನಿಸಿದರು, ಸತ್ಯ, ಸತ್ಯ, ಸತ್ಯ…
ಹೌದು, ಅಮೆರಿಕ ಒಂದರಲ್ಲಿ ಈ ರೀತಿಯ ಅಚ್ಚರಿ ಘಟನೆ ಒಂದು ನಡೆದಿದೆ. ತಲೆ ಇಲ್ಲದೆ 18 ತಿಂಗಳುಗಳ ಕಾಲ ಬದುಕುವ ಮೂಲಕ ಇಲ್ಲಿ ಕೋಳಿ ಒಂದು ಇತಿಹಾಸ ನಿರ್ಮಿಸಿದೆ. ಅಷ್ಟು ಮಾತ್ರವಲ್ಲ ಈ ತಲೆ ಇಲ್ಲದ ಕೋಳಿ ತನ್ನ ಮಾಲೀಕನನ್ನು ಸಿರಿವಂತನನ್ನಾಗಿ ರೂಪಿಸಿದೆ.
ಏನಿದು ಘಟನೆ?
ಇದು ಸೆಪ್ಟೆಂಬರ್ 1945 ರ ಘಟನೆ. ಅಮೆರಿಕದ ಕೊಲೊರಾಡೋದ ನಿವಾಸಿಗಳಾದ ಲಾಯ್ಡ್ ಓಲ್ಸನ್ ಮತ್ತು ಅವರ ಪತ್ನಿ ಕ್ಲಾರಾ ಚಿಕನ್ ಶಾಪ್ ಇಟ್ಟುಕೊಂಡಿದ್ದರು. ಹೀಗೆ ಒಂದು ದಿನ ವ್ಯಾಪಾರದ ವೇಳೆ ಲಾಯ್ಡ್ ಕೋಳಿಯ ತಲೆ ಕತ್ತರಿಸಿದ್ದ. ವಿಚಿತ್ರ ಅಂದ್ರೆ ಅದು ಸಾಯದೇ ನಡೆಯಲು ಪ್ರಾರಂಭವಿಸಿತು. ಈ ದೃಶ್ಯವನ್ನು ನೋಡಿ ಓಲ್ಸನ್ ಕುಟುಂಬ ಆಘಾತಕ್ಕೊಳಗಾಯಿತು. ಆಗ ತಕ್ಷಣ ಓಲ್ಸನ್ ಮೈಕ್ ಈ ಕೋಳಿಯ ಆರೈಕೆ ಮಾಡಲು ಪ್ರಾರಂಭಿಸಿದ.
ಅದಕ್ಕೆ ಟ್ಯೂಬ್ ಮೂಲಕ ನೀರು ಮತ್ತು ಆಹಾರವನ್ನು ನೀಡುತ್ತಿದ್ದ. ಮೈಕ್‌ನ ಶ್ವಾಸನಾಳದಲ್ಲಿ ಸಂಗ್ರಹವಾಗಿದ್ದ ಲೋಳೆಯನ್ನು ತೆಗೆದುಹಾಕಲು ಸಿರಿಂಜ್ ಅನ್ನು ಸಹ ಬಳಸಲಾಯಿತು. ಮೈಕ್‌ನ ಪವಾಡದ ಬಗ್ಗೆ ಸುತ್ತಮುತ್ತಲಿನ ಜನರಿಗೆ ತಿಳಿದಾಗ, ಆ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಈ ಕೋಳಿಯನ್ನು ನೋಡಲು ದೂರದೂರದಿಂದ ಜನರು ಬರಲು ಪ್ರಾರಂಭಿಸಿದರು. ಈ ವಿಶಿಷ್ಟ ಕೋಳಿ ಓಲ್ಸನ್ ಕುಟುಂಬಕ್ಕೆ ಬಹಳಷ್ಟು ಹಣವನ್ನು ಗಳಿಸಿಕೊಟ್ಟಿತು. ಅವರ ಜೀವನವನ್ನು ಸುಧಾರಿಸಿತು. ಅದಕ್ಕೆ ‘ಮೈಕ್’ ಎಂದು ಕೂಡ ನಾಮಕರಣ ಮಾಡಲಾಯಿತು
ಏಪ್ರಿಲ್ 1947 ರ ಒಂದು ರಾತ್ರಿ, ಮೈಕ್ ಅರಿಜೋನಾದ ಫೀನಿಕ್ಸ್‌ನಲ್ಲಿ ಪ್ರವಾಸದಲ್ಲಿದ್ದಾಗ, ಅವರಿಗೆ ಉಸಿರಾಟದ ತೊಂದರೆ ಶುರುವಾಯಿತು. ಓಲ್ಸನ್ ಕುಟುಂಬವು ತಕ್ಷಣವೇ ಸಿರಿಂಜ್ ಅನ್ನು ಹುಡುಕಲು ಪ್ರಯತ್ನಿಸಿತು, ಆದರೆ ದುರದೃಷ್ಟವಶಾತ್ ಅವರ ಬಳಿ ಅದು ಇರಲಿಲ್ಲ. ಪರಿಣಾಮವಾಗಿ, ಮೈಕ್ ಕಫ ಸಂಗ್ರಹವಾಗಿ ಉಸಿರುಗಟ್ಟಿ ಸಾವನ್ನಪ್ಪಿತು. ಓಲ್ಸನ್ ಇದನ್ನು ವರ್ಷಗಳ ಕಾಲ ರಹಸ್ಯವಾಗಿಟ್ಟಿದ್ದರೂ, ನಂತರ ಸತ್ಯ ಹೊರಬಂದಿತು.
ಕೋಳಿ ಬದುಕಿದ್ದು ಹೇಗೆ?
ವಿಜ್ಞಾನಿಗಳ ಪ್ರಕಾರ, ಕೋಳಿಯ ಮೆದುಳು ಹಿಂಭಾಗದಲ್ಲಿದೆ. ಓಲ್ಸನ್ ಮೈಕ್ ನ ಶಿರಚ್ಛೇದ ಮಾಡಿದಾಗ, ಅವನ ಮೆದುಳು ಮತ್ತು ಗಂಟಲಿನ ಒಂದು ಭಾಗ ಹಾಗೆಯೇ ಉಳಿದು, ಇದು ಕೋಳಿಗೆ ಬದುಕುಳಿಯಲು ಅವಕಾಶ ಮಾಡಿಕೊಟ್ಟಿತು. ಅದೃಷ್ಟವಶಾತ್, ರಕ್ತದ ಹರಿವು ಕೂಡ ಬೇಗನೆ ನಿಂತುಹೋಯಿತು, ಆದ್ದರಿಂದ ಅತಿಯಾದ ರಕ್ತಸ್ರಾವದಿಂದ ಸಾಯಲಿಲ್ಲ ಎಂದು ಹೇಳುತ್ತಾರೆ.
ಇನ್ನೂ ಮೈಕ್ ಸ್ಮರಣಾರ್ಥ ಕೊಲೊರಾಡೋದ ಫ್ರೂಟಾ ಪಟ್ಟಣದಲ್ಲಿ ‘ಮೈಕ್ ದಿ ಹೆಡ್‌ಲೆಸ್ ಚಿಕನ್ ಫೆಸ್ಟಿವಲ್’ ಅನ್ನು ವಾರ್ಷಿಕವಾಗಿ ಆಚರಿಸಲಾಗುತ್ತದೆ
Comments are closed.