of your HTML document.

ACCIDENT: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು, ಟ್ಯಾಂಕ‌ರ್ ನಡುವೆ ಅಪಘಾತ: ಮೂವರು ಸಾವು, ಮೂವರು ಗಂಭೀರ

Accident: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿ ಬ್ರಿಡ್ಜ್ ಬಳಿ ಕಾರು ಹಾಗೂ ಟ್ಯಾಂಕರ್ ನಡುವೆ ಬೀಕರ ಅಪಘಾತ (Accident) ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಚನ್ನಪಟ್ಟಣ ತಾಲೂಕಿನ ಮಂಗಾಡಳ್ಳಿ ಗ್ರಾಮದ ಶಿವಪ್ರಕಾಶ್ ಬಿನ್ ಜಗದೀಶ್ (37), ಪುಟ್ಟಗೌರಮ್ಮ ಕೋಂ ಮೋಟೆಗೌಡ (72), ಶಿವರತ್ನ ಕೋಂ ಚಿನ್ನ (50) ಎಂದು ಗುರುತಿಸಲಾಗಿದ್ದು, ನಟರಾಜು 42 ವರ್ಷ, ಹಾಗೂ ಸುಮಾ 36 ವರ್ಷ ಅವರಿಗೆ ಗಂಭೀರ ಗಾಯಗಳಾಗಿವೆ.

ಈ ಘಟನೆಗೆ ಸಂಬಂಧಪಟ್ಟಂತೆ ಚನ್ನಪಟ್ಟಣ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.

Comments are closed.