Customer Care: ಗ್ರಾಹಕ ದೂರು ಸೇವಾ ಕೇಂದ್ರ: 2024ರಲ್ಲಿ 1,500 ಕೋಟಿ ಗಂಟೆಗಳನ್ನು ಕಾಲ್ ಹೋಲ್ಡ್ನಲ್ಲಿ ಕಳೆದ ಭಾರತೀಯರು: ವರದಿ 

Share the Article

Customer Care: ಗ್ರಾಹಕ ಸೇವಾ ದೂರುಗಳನ್ನು(customer service complaint) ಸಲ್ಲಿಸಲು ಪ್ರಯತ್ನಿಸುವಾಗ ಭಾರತೀಯರು(Indians) 2024ರಲ್ಲಿ 1,500 ಕೋಟಿ ಗಂಟೆಗಳನ್ನು ಕಾಲ್ ಹೋಲ್ಡ್‌ ನಲ್ಲಿ ಕಳೆದಿದ್ದಾರೆ ಎಂದು ಹೊಸ ವರದಿಯೊಂದು(Report) ಬಹಿರಂಗಪಡಿಸಿದೆ. ಭಾರತೀಯರು ತಮ್ಮ ದೂರುಗಳನ್ನು ಪರಿಹರಿಸಲು 2023ಕ್ಕೆ ಹೋಲಿಸಿದರೆ 2024ರಲ್ಲಿ 3.2 ಗಂಟೆಗಳು ಕಡಿಮೆಯಾಗಿದೆ ಎಂದು ಸರ್ವಿಸ್ ನೌ ಗ್ರಾಹಕ ಅನುಭವ ವರದಿ ಹೇಳುತ್ತದೆ. ಶೇ.39 ಗ್ರಾಹಕರನ್ನು ಹೋಲ್ಡ್‌ನಲ್ಲಿ ಇಡಲಾಗಿತ್ತು ಮತ್ತು ಶೇ.36ರಷ್ಟು ಜನರ ಕರೆಯನ್ನು ಪದೇ ಪದೇ ವರ್ಗಾಯಿಸಲಾಗಿದೆ ಎಂದು ಅದು ಹೇಳಿದೆ.

ಹೆಚ್ಚುತ್ತಿರುವ ಗ್ರಾಹಕರ ನಿರೀಕ್ಷೆಗಳು ಮತ್ತು ಸೇವಾ ವಿತರಣೆಯ ವಾಸ್ತವತೆಯ ನಡುವಿನ ಅಂತರವನ್ನು ServiceNow ಗ್ರಾಹಕ ಅನುಭವ ವರದಿಯು ವಿಶ್ಲೇಷಿಸಿದೆ. ಈ ಬಗ್ಗೆ 5,000 ಭಾರತೀಯ ಗ್ರಾಹಕರು ಮತ್ತು 204 ಭಾರತೀಯ ಗ್ರಾಹಕ ಸೇವಾ ಏಜೆಂಟ್ಸ್ಗಳನ್ನು ಸಮೀಕ್ಷೆ ಮಾಡಲಾಗಿತ್ತು.

ದೂರು ಸ್ಥಿತಿಗತಿಗಳು ಮತ್ತು ಉತ್ಪನ್ನ ಶಿಫಾರಸುಗಳನ್ನು ಪರಿಶೀಲಿಸುವಂತಹ ಅಗತ್ಯ ಸೇವೆಗಳಿಗಾಗಿ ಈಗ ಶೇಕಡಾ 80 ರಷ್ಟು ಭಾರತೀಯ ಗ್ರಾಹಕರು AI ಚಾಟ್‌ಬಾಟ್‌ಗಳನ್ನು ಅವಲಂಬಿಸಿದ್ದಾರೆ. ಆದರೂ, ಇದೇ ಗ್ರಾಹಕರು ಒಟ್ಟಾಗಿ ಪ್ರತಿ ವರ್ಷ 15 ಬಿಲಿಯನ್ ಗಂಟೆಗಳ ಕಾಲ ಹೋಲ್ಡ್‌ನಲ್ಲಿ ಕಳೆಯುತ್ತಾರೆ, ಎಂದು ಹೇಳಲಾಗಿದೆ.

Comments are closed.