England: ಸಮುದ್ರ ತೀರದಲ್ಲಿ ನಿಗೂಢ ಪ್ರಾಣಿ ಪತ್ತೆ!!

England: ಇಂಗ್ಲೆಂಡ್ ಕಡಲ ತೀರವು ಒಂದು ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಅನ್ಯಗ್ರಹ ಜೀವಿಯನ್ನು ಹೋಲುವಂತಹ ಒಂದು ವಸ್ತು ಪತ್ತೆಯಾಗಿದೆ. ಇದು ಬಾಲ ಮತ್ತು ಅನ್ಯಗ್ರಹ ಜೀವಿಯ ರೀತಿ ತಲೆಯನ್ನು ಹೊಂದಿದ್ದು ಅಚ್ಚರಿಯನ್ನು ಉಂಟು ಮಾಡುತ್ತಿದೆ. ಈ ಕುರಿತಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹೌದು, ಇಂಗ್ಲೆಂಡ್‌ನ ಕಡಲತೀರದಲ್ಲಿ ವಿಹಾರಕ್ಕೆ ಹೋಗಿದ್ದ ದಂಪತಿ ಪೌಲಾ ಮತ್ತು ಡೇವ್ ರೇಗನ್ ಈ ವಿಚಿತ್ರ ವಸ್ತುವನ್ನು ಕಂಡಿದ್ದಾರೆ. ಮಾರ್ಚ್ 10 ರಂದು ಕರಾವಳಿ ಪಟ್ಟಣವಾದ ಮಾರ್ಗೇಟ್‌ನಲ್ಲಿದ್ದಾಗ ಮತ್ಸ್ಯಕನ್ಯೆಯಂತಹ ಅಸ್ಥಿಪಂಜರದ ಆಕೃತಿಯನ್ನು ಕಂಡಿದ್ದಾಗಿ ಅವರು ತಿಳಿಸಿದ್ದಾರೆ. ಇದರ ಫೋಟೋಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ವಿಚಿತ್ರ ವಸ್ತುವಿನಲ್ಲಿ ಮೀನಿನ ಬಾಲದಂತಹ ರಚನೆ, ಅನ್ಯಲೋಕದ ಜೀವಿಯಂತಹ ತಲೆಯನ್ನು ಒಳಗೊಂಡ ಕೆತ್ತಿದ ಮರದ ಆಕೃತಿಯಂತೆ ಕಾಣುತ್ತಿತ್ತು ಎಂದು ದಂಪತಿ ಹೇಳಿದ್ದಾರೆ. ಇದೀಗ ಪತ್ತೆಯಾದ ವಿಚಿತ್ರ ವಸ್ತುವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಉಂಟಾಗಿದೆ.
Comments are closed.