Sringeri: ʼಭೂಮಿ ಮೇಲೆ ಆಕಾಶ ಕೆಳಗಿದ್ದೇನೆ ತಾಕತ್ತಿದ್ದರೆ ಹುಡುಕಿʼ ಎಂದು ಪೊಲೀಸರಿಗೆ ಸವಾಲು ಹಾಕಿದ ಕುಡುಕ!

Sringeri: ಕುಡುಕನೋರ್ವ ಗುರುವಾರ ರಾತ್ರಿ ಶೃಂಗೇರಿ ಪೊಲೀಸರಿಗೆ ಹಾಗೂ ಆಂಬುಲೆನ್ಸ್‌ ಸಿಬ್ಬಂದಿಗೆ ಕಿರಿಕಿರಿ ಮಾಡಿದ ಘಟನೆ ನಡೆದಿದೆ. ಶೃಂಗೇರಿ ಬಸ್‌ ನಿಲ್ದಾಣದಲ್ಲಿ ಗುಂಪು ಘರ್ಷಣೆಯಾಗಿದೆ ಎಂದು ಏಮಾರಿಸಿದ್ದ ಕುಡುಕನನ್ನು ಹಿಡಿಯುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಗರಿಬೊಮ್ಮನಹಳ್ಳಿಯಿಂದ ಕೂಲಿ ಕೆಲಸಕ್ಕೆಂದು ಶೃಂಗೇರಿಗೆ ಬಂದಿದ್ದ ಮದ್ಯವ್ಯಸನಿ ಬಸವರಾಜ್‌ ಪೊಲೀಸರಿಗೆ ಫೋನ್‌ ಮಾಡಿ, ” ಶೃಂಗೇರಿ ಬಸ್‌ ನಿಲ್ದಾಣದಲ್ಲಿ ಗುಂಪು ಘರ್ಷಣೆ ಆಗಿದೆ ಎಂದು ಹೇಳಿದ್ದಾನೆ. ಅಷ್ಟು ಮಾತ್ರವಲ್ಲದೇ, ಆಂಬುಲೆನ್ಸ್‌ ಸಿಬ್ಬಂದಿಗೆ ಕರೆ ಮಾಡಿ, ಗುಂಪು ಘರ್ಷಣೆಯಲ್ಲಿ ಜನ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿದ್ದು, ಇಬ್ಬರೂ ಕೂಡಲೇ ಬಂದಿದ್ದಾರೆ.

ಆದರೆ ಗುಂಪು ಘರ್ಷಣೆ ಸುಳಿವು ಎಲ್ಲೂ ಕಂಡು ಬಂದಿಲ್ಲ. ಹೀಗೆ ಕಾಲ್‌ ಮಾಡಿದ ವ್ಯಕ್ತಿ ಪುನಃ ಕಾಲ್‌ ಮಾಡಿದ್ದಾನೆ. ಕುಡುಕ ಬಸವರಾಜ್‌, ” ಭೂಮಿ ಮೇಲೆ ಆಕಾಶ ಕೆಳಗಿದ್ದೇನೆ ತಾಕತ್ತಿದ್ದರೆ ಹುಡುಕಿʼ ಎಂದು ಸವಾಲು ಬೇರೆ ಹಾಕಿದ್ದಾನೆ. ನಂತರ ಅದ್ಹೇಗೋ ಪೊಲೀಸರು ಕುಡುಕನನ್ನು ವಶಕ್ಕೆ ಪಡೆದಿದ್ದಾರೆ.

ಶೃಂಗೇರಿ ಪೊಲೀಸರು ನಂತರ ಕುಡುಕ ಬಸವರಾಜ್‌ಗೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.

Comments are closed.