Karnataka Assembly Session: ಮದರಸಾ ಶಿಕ್ಷಣ ವಿವಾದ- ಸದನದಲ್ಲಿ ಆಕ್ರೋಶ!

Karnataka Assembly Session: ಮದರಸಾಗಳಲ್ಲಿ ಭಾರತ ವಿರೋಧಿ ಪಾಠ ಹೇಳಿ ಕೊಡಲಾಗುತ್ತಿದೆ ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆ ನೀಡಿದ್ದಾರೆ. ಇದು ಭಾರೀ ವಾಗ್ವಾದಕ್ಕೆ ಕೋಲಾಹಲಕ್ಕೆ ಕಾರಣವಾಯಿತು.

ಕಾಂಗ್ರೆಸ್‌ ಸದಸ್ಯ ರಿಜ್ವಾನ್‌ ಅರ್ಷದ್‌ ಅವರು ಯತ್ನಾಳ್‌ ಮಾತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಯತ್ನಾಳ್‌ಗೆ ಮಾನ ಮರ್ಯಾದೆ ಇದೆಯೇ? ಅವರೊಬ್ಬ ದೇಶದ್ರೋಹಿ ಎಂದು ಹೇಳಿದರು. ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದೀರಾ? ಸುಮ್ಮನೆ ಇರ್ರೀ’ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಸದಸ್ಯರು ರಿಜ್ವಾನ್‌ ಅರ್ಷದ್‌ ಬೆಂಬಲಕ್ಕೆ ಬಂದರು. ಈ ನಡುವೆ, ಬಿಜೆಪಿ ಸದಸ್ಯರು ಯತ್ನಾಳ್‌ ಬೆಂಬಲಕ್ಕೆ ನಿಂತ ಕಾರಣ ಸದನದಲ್ಲಿ ಗದ್ದಲ, ಕೋಲಾಹಲ ಸೃಷ್ಟಿಯಾಯಿತು.

ಬಜೆಟ್‌ನಲ್ಲಿ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿ ಆದ್ಯತೆ ನೀಡಲಾಗಿದೆ. 100 ಉರ್ದು ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲಾಗಿದೆ. ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣ ಜೊತೆ ಔಪಚಾರಿಕ ಶಿಕ್ಷಣಕ್ಕೆ ಒತ್ತು ಕೊಡಲು ಅನುದಾನ ನೀಡಲಾಗಿದೆ. ಆದರೆ ಮದರಸಾಗಳಲ್ಲಿ ಭಾರತದ ವಿರುದ್ಧ ಪಾಠ ಕಲಿಸಲಾಗುತ್ತದೆ ಎಂದು ಆರೋಪ ಮಾಡಿದರು.

 

Comments are closed.