Women Astronauts: ಬಾಹ್ಯಾಕಾಶದಲ್ಲಿ ಮಹಿಳಾ ಗಗನ ಯಾತ್ರಿಗಳು ಮುಟ್ಟಾದರೆ ಏನು ಮಾಡುತ್ತಾರೆ ?

 

Women Astronauts: ಬರೋಬ್ಬರಿ ಒಂಬತ್ತು ತಿಂಗಳಗಳ ಬಳಿಕ ಪುತ್ರಿ ಸುನಿತಾ ವಿಲಿಯಮ್ಸ್ ಅವರು ಬಾಹ್ಯಾಕಾಶದಿಂದ ಭೂಮಿಗೆ ಮರಳಿದ್ದಾರೆ. ಗಗನ ಯಾತ್ರಿಗಳ ಜೀವನ ನಾವು ಅಂದುಕೊಂಡಷ್ಟು ಸುಲಭವಲ್ಲ. ಅಲ್ಲಿಂದ ಬದುಕಿ ಬಂದರೆ ಅದೊಂದು ರೀತಿ ಮರು ಹುಟ್ಟು ಪಡೆದಂತೆ. ಅಲ್ಲಿ ಅವರು ಅನೇಕ ಸಾಲು ಸಾಲು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಮಹಿಳಾ ಗಗನ ಯಾತ್ರಿಗಳಿಗಂತೂ ಇದು ತುಸು ಹೆಚ್ಚು ಎನ್ನಬಹುದು. ಯಾಕೆಂದರೆ ಅವರಿಗೆ ಅವರದ್ದೇ ಆದ ಕೆಲವು ವೈಯಕ್ತಿಕ ಸಮಸ್ಯೆಗಳು ಕೂಡ ಇರುತ್ತವೆ. ಹೀಗಾಗಿ ಇದೆಲ್ಲವನ್ನು ಅವರು ನಿಭಾಯಿಸಬೇಕು. ಹಾಗಾದರೆ ಬಾಹ್ಯಾಕಾಶದಲ್ಲಿ ಮಹಿಳಾ ಗಗನಯಾತ್ರಿಗಳು ಮುಟ್ಟಾದರೆ ಏನು ಮಾಡುತ್ತಾರೆ ಗೊತ್ತಾ?

 

ಹೌದು, ಬಾಹ್ಯಾಕಾಶದಲ್ಲಿ ಒಂದು ಹನಿ ನೀರು ಸಹ ಗಾಳಿಯಲ್ಲಿ ತೇಲುತ್ತಿರುವಂತೆ ತೋರುವಾಗ, ಮುಟ್ಟಿನ ಸಮಯದಲ್ಲಿ ದೇಹದಿಂದ ಹರಿಯುವ ರಕ್ತಕ್ಕೆ ಏನಾಗುತ್ತದೆ? ಶೂನ್ಯ ಗುರುತ್ವಾಕರ್ಷಣೆಯಲ್ಲಿ ಋತುಚಕ್ರವನ್ನು ಹೇಗೆ ನಿರ್ವಹಿಸಲಾಗುತ್ತದೆ? ಎಂಬ ಪ್ರಶ್ನೆ ಮೂಡುವುದು ಸಹಜ. ಇಂತಹ ಅನುಮಾನಗಳಿಗೆ ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾದ ಮಹಿಳಾ ಗಗನಯಾತ್ರಿ ರಿಯಾ ಮಾಧ್ಯಮ ಸಂದರ್ಶನದಲ್ಲಿ ಉತ್ತರಿಸಿದ್ದಾರೆ.

 

 ಬಾಹ್ಯಾಕಾಶಕ್ಕೆ ಹೋಗುವ ಮಹಿಳೆಯರಿಗೆ ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಎರಡು ಆಯ್ಕೆಗಳು ಇರುತ್ತವೆ. ಮೊದಲನೆಯದು ಬಾಹ್ಯಾಕಾಶದಲ್ಲಿ ಋತುಚಕ್ರ ಆಗಲು ಬಿಡುವಂತದ್ದು. ಅಂದರೆ ಭೂಮಿಯ ಮೇಲೆ ಹೇಗೆ ಋತುಚಕ್ರ ಆದಾಗ ಯಾವ ರೀತಿ ಸ್ಯಾನಿಟರಿ ಪ್ಯಾಡ್ ಅಥವಾ ಟ್ಯಾಂಪೂನ್ ಗಳನ್ನು ಬಳಕೆ ಮಾಡುವಂತೆ ಅಲ್ಲಿಯೂ ಮಾಡಬಹುದು. ಆದರೆ ಸೀಮಿತ ನೀರಿನ ಲಭ್ಯತೆ, ಸೀಮಿತ ಶೇಖರಣೆಯಿಂದಾಗಿ ತ್ಯಾಜ್ಯ ವಿಲೇವಾರಿ ಮತ್ತು ನೈರ್ಮಲ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ.

 

ಎರಡನೇ ವಿಧಾನ, ಹಾರ್ಮೋನುಗಳ ಗರ್ಭನಿರೋಧಕಗಳನ್ನು ಅಂದರೆ ಜನನ ನಿಯಂತ್ರಣ ಮಾತ್ರೆಗಳನ್ನು ಬಳಸುವ ಮೂಲಕ ಅವರು ಋತುಚಕ್ರವನ್ನು ತಪ್ಪಿಸಬಹುದು. ಈ ಮಾತ್ರೆಗಳು ಈಸ್ಟ್ರೊಜೆನ್ ಅನ್ನು ಹೊಂದಿರುತ್ತವೆ, ಇದು ಋತುಚಕ್ರವನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ, ಆದರೆ ಬಾಹ್ಯಾಕಾಶದಲ್ಲಿದ್ದಾಗ, ಪ್ರತಿದಿನ ಈ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಆಯ್ಕೆಯು ಸುರಕ್ಷಿತ ಮತ್ತು ಪರಿಣಾಮಕಾರಿ. ಈ ವಿಧಾನ ಮಹಿಳೆಯರಿಗೆ ಯಾವುದೇ ರೀತಿಯ ಅಡ್ಡಪರಿಣಾಮಗಳನ್ನು ಬೀರುವುದಿಲ್ಲ. ಆದರೆ ಮಿಷನ್ ಅವಧಿ ಮತ್ತು ಆರೋಗ್ಯದಂತಹ ಕೆಲವು ಅಂಶಗಳನ್ನು ಗಣನೆಗೆ ತೆಗೆದುಕೊಂಡ ಬಳಿಕ, ಈ ಆಯ್ಕೆ ಮಾಡುವ ನಿರ್ಧಾರ ಸಂಪೂರ್ಣ ವೈಯಕ್ತಿಕವಾಗಿರುತ್ತದೆ ಎಂದು ಅವರು ಉತ್ತರಿಸಿದ್ದಾರೆ.

Comments are closed.