Hubballi: ವಿಧಾನಸೌಧದ ಎದುರು ಸಲ್ಲೇಖನ ವ್ರತ ಸ್ವೀಕರಿಸುವೆ – ಕಣ್ಣೀರಿಟ್ಟು ಎಚ್ಚರಿಕೆ ನೀಡಿದ ಜೈನಮುನಿ!!

Hubballi: ರಾಜ್ಯ ಸರ್ಕಾರದ (state government) ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಹುಬ್ಬಳ್ಳಿಯ (Hubballi) ವರೂರು ನವಗ್ರಹತೀರ್ಥ ಕ್ಷೇತ್ರದ (Varur Navagrahatheertha Kshetra) ಗುಣಧರನಂದಿ ಮಹಾರಾಜರು (Gunadharanandi Maharaja) ಜೈನ ಧರ್ಮದ (Jainism) ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಮುಂದುವರಿದರೆ ಸಲ್ಲೇಖನ ವೃತ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಈ ಕುರಿತಾಗಿ ಮಾಧ್ಯಮಗಳ ಎದುರು ಕಣ್ಣೀರು ಹಾಕಿ ಅವರು ಮಾತನಾಡಿದ್ದಾರೆ.
ಹೌದು, ಜೈನ ಧರ್ಮದ ಬಗ್ಗೆ ರಾಜ್ಯ ಸರ್ಕಾರದಿಂದ ದಿವ್ಯ ನಿರ್ಲಕ್ಷ್ಯ ಅಂತ ಆರೋಪಿಸಿರುವ ಗುಣಧರನಂದಿ ಮಹಾರಾಜ, ಮಾಧ್ಯಮಗಳ ಎದುರೇ ಕಣ್ಣೀರು ಹಾಕಿದ್ದಾರೆ. ಜೈನ ಅಭಿವೃದ್ಧಿ ನಿಗಮ – ಮಂಡಳಿ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರವನ್ನು ಆಗ್ರಹಿಸಿ ಜೈನ ಸಮಾಜದ ಬಾಂಧವರಿಂದ ನಾಡಿದ್ದು ಬೆಂಗಳೂರು ಚಲೋಗೆ ಗುಣಧರನಂದಿ ಮಹಾರಾಜ ಕರೆ ಕೊಟ್ಟಿದ್ದಾರೆ.
ಜೈನ ಅಭಿವೃದ್ಧಿ ನಿಗಮ- ಮಂಡಳಿ ಸ್ಥಾಪನೆ ಸೇರಿದಂತೆ ಒಟ್ಟು 7 ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಭರವಸೆ ನೀಡಿತ್ತು. ಆದ್ರೆ, ಇದುವರೆಗೆ ಮೂರು ಬೇಡಿಕೆಗಳು ಮಾತ್ರ ಈಡೇರಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಜೈನ ಸಮುದಾಯದ ಯಾವುದೇ ಬೇಡಿಕೆಗಳನ್ನು ಈಡೇರಿಸದೇ ನಿರ್ಲಕ್ಷಿಸಿದ್ದಾರೆ. ಹೀಗಾಗಿ ಶೀಘ್ರವೇ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ. ರಾಜ್ಯ ಸರ್ಕಾರ ನಿರ್ಲಕ್ಷ್ಯ ಮುಂದುವರೆಸಿದರೆ ಬೆಂಗಳೂರಿನ ವಿಧಾನಸೌಧದ ಎದುರು ಅನ್ನ, ನೀರು ತ್ಯಜಿಸುವ ಮೂಲಕ ಸಲ್ಲೇಖನ ವೃತ ಕೈಗೊಳ್ಳುತ್ತೇವೆ ಅಂತ ಗುಣಧರನಂದಿ ಮಹಾರಾಜರು ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
Comments are closed.