Dharmasthala: ಬೈಕ್ ಮತ್ತು ಬಸ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಗಂಭೀರ ಗಾಯ!

Dharmasthala: ಬೈಕ್ ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಮಾ.19 ರಂದು ಮಧ್ಯರಾತ್ರಿ ನಡೆದಿದೆ. ಕನ್ಯಾಡಿ ಸೇವಾ ಭಾರತಿ ಸಂಸ್ಥೆಯ ಸಮೀಪ ಈ ಭೀಕರ ಅಪಘಾತ ಸಂಭವಿಸಿದೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಉಜಿರೆ ಧನ್ವಿ ಆಂಬುಲೆನ್ಸ್ ಸಹಾಯದ ಮೂಲಕ ಪ್ರಥಮ ಚಿಕಿತ್ಸೆಗೆಂದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆಂದು ಹಾಸನಕ್ಕೆ ಜನಪ್ರಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಹಾಸನದಿಂದ ಉಜಿರೆಗೆ ಪ್ರಯಾಣ ಮಾಡುತ್ತಿದ್ದ ಪಲ್ಸರ್ ಬೈಕ್ ಸವಾರ ಮಂಜುನಾಥ್ ಹಾಗೂ ಉಜಿರೆ ಕಡೆಯಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದ ವಿಜಯಾನಂದ ಬಸ್ ನಡುವೆ ಅಪಘಾತ ನಡೆದಿದೆ. ಈ ಅಪಘಾತದಲ್ಲಿ ಬೈಕ್ ಸಂಪೂರ್ಣ ಹಾನಿಯಾಗಿದ್ದು, ಜೊತೆಗೆ ಬೈಕ್ ಸವಾರನಿಗೂ ಗಂಭೀರ ಗಾಯವಾಗಿದೆ.
ಬೈಕ್ ಸವಾರನ ಮೊಬೈಲ್ ತೆಗೆದುಕೊಂಡು ಧನ್ವಿ ಆಂಬುಲೆನ್ಸ್ ಮಾಲಕ ಮನೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
Comments are closed.