New Traffic Rules: ಹೊಸ ಟ್ರಾಫಿಕ್ ರೂಲ್ಸ್ ಜಾರಿ; ಯಾವುದಕ್ಕೆ ಎಷ್ಟು ದಂಡ?

2025 New Motor Vehicle Fines: 2025 ರ ಹೊಸ ಸಂಚಾರಿ ನಿಯಮವನ್ನು ಸರಕಾರ ಜಾರಿಗೆ ತಂದಿದೆ. ಈ ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆಗೆ 10 ಪಟ್ಟು ಹೆಚ್ಚಿನ ದಂಡ ವಿಧಿಸಲಾಗಿದೆ. ಮಾ.1 ರಿಂದಲೇ ದಂಡದ ನಿಯಮ ಜಾರಿಗೆ ಬಂದಿದೆ.
ನಿಯಮದಲ್ಲಿ ಏನಿದೆ?
ಡ್ರಂಕ್ ಅಂಡ್ ಡ್ರೈವಿಂಗ್ಗೆ 10 ಸಾವಿರ ರೂಪಾಯಿ ದಂಡ, 6 ತಿಂಗಳು ಜೈಲುಶಿಕ್ಷೆ ಈ ಮೊದಲು ಡ್ರಂಕ್ ಅಂಡ್ ಡ್ರೈವಿಂಗ್ಗೆ 1 ಸಾವಿರ ರೂಪಾಯಿ ದಂಡ ಇತ್ತು.
ಡ್ರಂಕ್ ಅಂಡ್ ಡ್ರೈವಿಂಗ್ ಪುನಾರಾವರ್ತನೆಯಾದರೆ 15 ಸಾವಿರ ರೂಪಾಯಿ ದಂಡ 2 ವರ್ಷ ಜೈಲುಶಿಕ್ಷೆ ವಿಧಿಸಲಾಗುತ್ತದೆ.
ಡ್ರೈವಿಂಗ್ ವೇಳೆ ಮೊಬೈಲ್ ಪೋನ್ ಬಳಕೆ ಮಾಡಿದರೆ 5 ಸಾವಿರ ರೂಪಾಯಿ ದಂಡ. ಈ ಹಿಂದೆ ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಮಾಡಿದರೆ 500 ರೂಪಾಯಿ ದಂಡ ಇತ್ತು.
ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿದರೆ ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಅಲ್ಲದೇ 3 ತಿಂಗಳು ಕಾಲ ಡ್ರೈವಿಂಗ್ ಲೈಸೆನ್ಸ್ ಸಸ್ಪೆಂಡ್ ಕೂಡ ಮಾಡಬಹುದು. ಈ ಮೊದಲು ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿದರೆ 100 ರೂಪಾಯಿ ದಂಡ ವಿಧಿಸಲಾಗುತ್ತಿತ್ತು.
ಇನ್ನು ಕಾರಿನ ಸೀಟ್ ಬೆಲ್ಟ್ ಹಾಕದಿದ್ದರೆ ಒಂದು ಸಾವಿರ ರೂಪಾಯಿ ದಂಡ ವಿಧಿಸಲು ಸಾರಿಗೆ ಇಲಾಖೆ ಆದೇಶ ಮಾಡಿದೆ.
ವ್ಯಾಲಿಡ್ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದರೆ 5 ಸಾವಿರ ರೂಪಾಯಿ ದಂಡ ಬೀಳಲಿದೆ.
ವಾಹನದ ಇನ್ಸೂರೆನ್ಸ್ ಇಲ್ಲದೇ ವಾಹನ ಚಲಾಯಿಸಿದರೇ 2 ಸಾವಿರ ರೂಪಾಯಿ ದಂಡ ಕಟ್ಟಬೇಕು
ಮಾಲಿನ್ಯ ಸರ್ಟಿಫಿಕೇಟ್ ಇಲ್ಲದೆ ವಾಹನ ಚಲಾಯಿಸಿದರೆ 10 ಸಾವಿರ ರೂಪಾಯಿ ದಂಡ ಹಾಗೂ 6 ತಿಂಗಳು ಜೈಲುಶಿಕ್ಷೆ, ಸಮುದಾಯ ಸೇವೆ
ಬೈಕ್ನಲ್ಲಿ ಟ್ರಿಪಲ್ ರೈಡಿಂಗ್ ಮಾಡಿದರೆ ಒಂದು ಸಾವಿರ ರೂಪಾಯಿ ದಂಡ ಬೀಳಲಿದೆ
ನಿರ್ಲಕ್ಷ್ಯದ ಚಾಲನೆ ಮಾಡಿದರೆ 5 ಸಾವಿರ ರೂಪಾಯಿ ದಂಡ ಕಟ್ಟಬೇಕು
ಅಂಬ್ಯುಲೆನ್ಸ್ಗೆ ರಸ್ತೆ ಬಿಡದೆ ವಾಹನ ಚಲಾಯಿಸಿದ 10 ಸಾವಿರ ರೂಪಾಯಿ ದಂಡ ಕಟ್ಟಬೇಕು
ಸಿಗ್ನಲ್ ಜಂಪ್ ಮಾಡಿದ್ರೆ 5 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ
ವಾಹನಗಳನ್ನು ಓವರ್ ಲೋಡ್ ಮಾಡಿ ಚಲಾಯಿಸಿದರೆ 20 ಸಾವಿರ ರೂಪಾಯಿ ದಂಡ
ಅಪ್ರಾಪ್ತರು ವಾಹನ ಚಲಾಯಿಸಿದರೆ 25 ಸಾವಿರ ರೂಪಾಯಿ ದಂಡ ಹಾಗೂ 3 ವರ್ಷ ಜೈಲುಶಿಕ್ಷೆ. ವಾಹನದ ನೋಂದಾಣಿ ಕೂಡ ರದ್ದು ಮಾಡಲಾಗುತ್ತದೆ. 25 ವರ್ಷ ಆಗುವವರೆಗೂ ಡ್ರೈವಿಂಗ್ ಲೈಸೆನ್ಸ್ ಸಿಗಲ್ಲ.
Comments are closed.