UP: ವಿವಾಹಿತ ಪ್ರೇಯಸಿ ಮನೆಗೆ ಹುಡುಗಿ ವೇಷದಲ್ಲಿ ನುಗ್ಗಿದ ಪ್ರಿಯತಮ – ಮುಂದೆ ನಡೆದೆ ಹೋಯ್ತು ಘೋರ ದುರಂತ!!

UP: ಈಗಾಗಲೇ ಮದುವೆಯಾಗಿರುವಂತಹ ತನ್ನ ಮಾಜಿ ಪ್ರಿಯತಮೆಯ ಮನೆಗೆ ಪ್ರಿಯತಮನು ಹುಡುಗಿಯಂತೆ ವೇಷ ಧರಿಸಿ ನುಗ್ಗಿ, ಆಕೆಗೆ ಬೆಂಕಿ ಹಚ್ಚಿ ಕೊಲ್ಲಲು ಪ್ರಯತ್ನಿಸಿರುವಂತಹ ಭಯಾನಕ ಘಟನೆ ಒಂದು ಉತ್ತರ ಪ್ರದೇಶದ ಮಥುರದಲ್ಲಿ ನಡೆದಿದೆ.

ಕೋಹ್ ಗ್ರಾಮದ ನಿವಾಸಿ ರೇಖಾ ಕುಮಾರಿ ಸಂತ್ರಸ್ತ ಮಹಿಳೆ. ಹರಿಯಾಣದ ಪಲ್ವಾಲ್ ಜಿಲ್ಲೆಯ ಕಾರ್ಮಿಕ ಉಮೇಶ್ ಸಿಂಗ್ ಈ ಕುಕೃತ್ಯ ಮಾಡಿದ ಆರೋಪಿ. ರೇಖಾ ಅವರಿಗೆ ಈಗಾಗಲೇ ಮದುವೆಯಾಗಿ ಮಕ್ಕಳೂ ಇದ್ದಾರೆ. ಆಕೆ ಪತಿ ಕೆಲಸಕ್ಕೆ ಹಾಗೂ ಮಕ್ಕಳು ಶಾಲೆಗೆ ಹೋಗಿದ್ದ ಸಂದರ್ಭದಲ್ಲಿ ಟಿ.ವಿ.ನೋಡುತ್ತಾ ಕುಳಿತಿದ್ದರು. ಆ ಸಮಯದಲ್ಲಿ ಬಂದ ಆರೋಪಿ ಬಾಟಲಿಯಲ್ಲಿ ಪೆಟ್ರೋಲ್​ ತಂದು, ಆಕೆಯ ಕೋಣೆಗೆ ಹೋಗಿ ತನ್ನೊಂದಿಗೆ ಓಡಿಹೋಗುವಂತೆ ಒತ್ತಡ ಹೇರಿದ್ದಾನೆ. ಆಕೆ ನಿರಾಕರಿಸಿದಾಗ, ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

 

ರೇಖಾ ಅವರ ಕಿರುಚಾಟ ಕೇಳಿ ನೆರೆಹೊರೆಯವರು ಆಕೆಯ ಸಹಾಯಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು ಮತ್ತು ನಂತರ ಆಗ್ರಾದ ಎಸ್‌ಎನ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ರೇಖಾ ಅವರಿಗೆ ಶೇಕಡಾ 70ರಷ್ಟು ಸುಟ್ಟಗಾಯಗಳಾಗಿದ್ದು, ಅವರು ಸಾವು ಬದುಕಿನ ನಡುವೆ ಆಸ್ಪತ್ರೆಗೆ ಹೋರಾಡುತ್ತಿದ್ದಾರೆ.

ಇನ್ನೂ ಕೆಲ ವರ್ಷಗಳಿಂದ ಇಬ್ಬರೂ ಸಂಬಂಧದಲ್ಲಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆಗಾಗ್ಗೆ ಆರೋಪಿ ಈಕೆಯ ಮನೆಗೆ ಬರುತ್ತಿದ್ದ. ಹಿಂದೆ ಕೂಡ ಓಡಿಹೋಗಿದ್ದರು. ಆದರೆ ರೇಖಾ ಮನೆಯವರು ದೂರು ದಾಖಲಿಸಿದ್ದರಿಂದ ಇಬ್ಬರೂ ಹಿಮಾಚಲ ಪ್ರದೇಶದಿಂದ ವಾಪಸ್​ ಬಂದಿದ್ದರು. ಇದಾದ ಬಳಿಕ ರೇಖಾ ಆತನಿಂದ ದೂರ ಕಾಪಾಡಿಕೊಳ್ಳಲು ಶುರು ಮಾಡಿದ್ದಳು. ಇದರಿಂದ ರೊಚ್ಚಿಗೆದ್ದಿರುವ ಆರೋಪಿ ಹೀಗೆ ಮಾಡಿರುವುದಾಗಿ ತಿಳಿಸಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Comments are closed.