Kerala: ಮೀನು ಕಚ್ಚಿದ್ದನ್ನು ಲೈಟ್ ಆಗಿ ತೆಗೆದುಕೊಂಡ ಯುವಕ – ಕೊನೆಗೆ ಬಲಗೈಯನ್ನೇ ಕಳೆದುಕೊಂಡ

Share the Article

 

Kerala: ಯುವಕನೋರ್ವ ಮೀನು ಕಚ್ಚಿದ ವಿಚಾರವನ್ನು ಹಗುರವಾಗಿ ತೆಗೆದುಕೊಂಡಿದ್ದು ಇದರ ಪರಿಣಾಮ ಕೊನೆಗೆ ಆತನ ಬಲಗೈಯನ್ನೇ ಕತ್ತರಿಸಿರುವಂತಹ ಅಚ್ಚರಿ ಪ್ರಕರಣ ಒಂದು ಕೇರಳದಲ್ಲಿ ಬೆಳಕಿಗೆ ಬಂದಿದೆ.

 

ಹೌದು, ಕಣ್ಣೂರು ಜಿಲ್ಲೆಯ ತಲಸ್ಸೆರಿ ಪ್ರದೇಶದ ಟಿ. ರಾಜೇಶ್ ಎಂಬ ರೈತ ಸ್ಥಳೀಯ ಒಂದು ಸಣ್ಣ ಕೊಳವನ್ನು ಸ್ವಚ್ಛಗೊಳಿಸಿವ ಸಂದರ್ಭದಲ್ಲಿ ಮೀನು ಒಂದು ಕಚ್ಚಿದೆ. ಬಳಿಕ ಪರಿಶೀಲಿಸಿದಾಗ ಅದೊಂದು ಕಾಡು ಜಾತಿಯ ಮೀನು ಎಂದು ತಿಳಿದುಬಂದಿದೆ. ಬೆರಳಿಗೆ ಆದ ಸಣ್ಣ ಗಾಯವನ್ನು ಕಂಡ ರಾಜೇಶ್ ಅವರು ಪ್ರಾಥಮಿಕ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ. ಕೆಲವು ದಿನಗಳ ನಂತರ, ನನ್ನ ಕೈ ನೋವು ಶುರುವಾಯಿತು. ಅಷ್ಟೇ ಅಲ್ಲ, ಅಂಗೈಯಲ್ಲಿ ಗುಳ್ಳೆಗಳು ಕೂಡ ಬಂದವು. ಇದರೊಂದಿಗೆ ಅವರು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋದರು. ಅಲ್ಲಿನ ವೈದ್ಯರು ರಾಜೇಶ್‌ಗೆ ಕೋಝಿಕ್ಕೋಡ್ ಬೇಬಿ ಮೆಮೋರಿಯಲ್ ಆಸ್ಪತ್ರೆಗೆ ಹೋಗುವಂತೆ ಹೇಳಿದ್ದಾರೆ.

 

ಬಳಿಕ ಅಲ್ಲಿನ ವೈದ್ಯರು ರಾಜೇಶ್‌ಗೆ ಎಲ್ಲಾ ರೀತಿಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ, ಅವನಿಗೆ ಗ್ಯಾಸ್ ಗ್ಯಾಂಗ್ರೀನ್ ಎಂಬ ಬ್ಯಾಕ್ಟೀರಿಯಾದ ಸೋಂಕು ಇದೆ ಎಂದು ದೃಢಪಡಿಸಿದರು. ಬೆರಳುಗಳನ್ನು ತೆಗೆಯದಿದ್ದರೆ ಬ್ಯಾಕ್ಟೀರಿಯಾ ಹರಡಿ ಮತ್ತಷ್ಟು ಸೋಂಕು ತಗಲುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು. ಅವನ ಒಪ್ಪಿಗೆಯ ಮೇರೆಗೆ ವೈದ್ಯರು ರಾಜೇಶ್‌ನ ಬೆರಳುಗಳನ್ನು ಹೊರತೆಗೆದರು. ಆದರೆ, ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ. ಸೋಂಕು ಮತ್ತಷ್ಟು ಹರಡಿದೆ. ರಾಜೇಶ್‌ಗೆ ತನ್ನ ಅಂಗೈಯನ್ನು ತೆಗೆಯುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ ಎಂದು ಕೃಷ್ಣಕುಮಾರ್ ಹೇಳಿದರು. ಹೀಗಾಗಿ ರಾಜೇಶ್ ಅಂಗೈಯನ್ನು ಕತ್ತರಿಸಲಾಗಿದೆ.

 

ಏನಿದು ಗ್ಯಾಸ್ ಗ್ಯಾಂಗ್ರೀನ್?

ಗ್ಯಾಸ್ ಗ್ಯಾಂಗ್ರೀನ್ ಎಂಬ ಈ ಸೋಂಕು ಕೆಸರಿನ ನೀರಿನಲ್ಲಿ ಕಂಡುಬರುವ ಕ್ಲೋಸ್ಟ್ರಿಡಿಯಮ್ ಪರ್ಫ್ರಿಂಜನ್ಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಈ ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸಿ ಜೀವಕೋಶಗಳನ್ನು ನಾಶಮಾಡುತ್ತವೆ. ಸೋಂಕು ಮೆದುಳಿಗೆ ಹರಡಿದರೆ, ಅದು ಜೀವಕ್ಕೆ ಅಪಾಯಕಾರಿಯಾಗಬಹುದು.

Comments are closed.