Bantwal: ಮಂಗಳೂರು ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ; ಮನೆಗೆ ಹೋಗಲು ನಕಾರ-ಪೊಲೀಸ್ ವರದಿ

Bantwal: ಬಂಟ್ವಾಳದ ಫರಂಗಿಪೇಟೆ ನಿವಾಸಿ ದಿಗಂತ್ ನಾಪತ್ತೆಯಾಗಿದ್ದು, ಅನಂತರ ದಿಢೀರ್ ಆಗಿ ಉಡುಪಿ ಡಿಮಾರ್ಟ್‌ನಲ್ಲಿ ಪತ್ತೆಯಾಗಿದ್ದ. ಅನಂತರ ಪೊಲೀಸರು ಮಂಗಳೂರಿಗೆ ಕರೆದುಕೊಂಡು ಬಂದಿದ್ದರು. ಈ ಪ್ರಕರಣದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ಇಂದು ಬುಧವಾರ (ಮಾ.12) ಕ್ಕೆ ಹೈಕೋರ್ಟ್‌ನಲ್ಲಿ ನಡೆದಿದೆ.
ಇದೀಗ ದಿಗಂತ್ ಮನೆಗೆ ಹೋಗಲು ಒಪ್ಪುತ್ತಿಲ್ಲ ಎಂದು ಬಂಟ್ವಾಳ ಪೊಲೀಸರು ಹೈಕೋರ್ಟ್ ಸಲ್ಲಿಸಿದ ಅಫಿಡವಿಟ್ ಉಲ್ಲೇಖ ಮಾಡಲಾಗಿದೆ. ದಿಗಂತ್ ಪತ್ತೆ ಬಗ್ಗೆ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಅಫಿಡವಿಟ್‌ನಲ್ಲಿ ದಿಗಂತ್ ಪತ್ತೆ ಕುರಿತು ಹಾಗೂ ದಿಗಂತ್ ಹೇಳಿಕೆಗಳನ್ನು ಉಲ್ಲೇಖ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಗನನ್ನು ಕಳುಹಿಸಿ ಕೊಡುವಂತೆ ದಿಗಂತ್ ಪೋಷಕರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ದಿಗಂತ್ ಪತ್ತೆಯಾದ ಸಂದರ್ಭದಲ್ಲಿ ತನ್ನ ತಾಯಿಯ ಜೊತೆ ಫೋನ್‌ನಲ್ಲಿ ನಾನಾಗಿ ಹೋಗಿಲ್ಲ, ನನ್ನನ್ನು ಎತ್ತುಕೊಂಡು ಹೋಗಿದ್ದಾನೆ ಎಂದು ಹೇಳಿರುವುದಾಗಿ ಪೋಷಕರು ಹೇಳಿದರು. ಆದರೆ ದಿಗಂತ್ ಈ ಮಾತನ್ನು ಅಲ್ಲಗೆಳೆದಿದ್ದು, ನಾನಾಗಿಯೇ ಹೋಗಿರುವುದಾಗಿ ಎಂದು ಹೇಳಿದ್ದಾನೆ. ಪರೀಕ್ಷೆ ಭಯದಿಂದ ಹೋಗಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾಗಿ ಪೊಲೀಸರ ವರದಿಯಲ್ಲಿದೆ.
ಈ ಸಂದರ್ಭದಲ್ಲಿ ಪಿಯುಸಿ ಪರೀಕ್ಷೆ ಇನ್ನೂ ಮುಗಿಯದ ಕಾರಣ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಪೋಷಕರು ಮನವಿ ಮಾಡಿದ್ದಾರೆ.
ಪರೀಕ್ಷೆ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳದಂತೆ ಸೂಚನೆ ನೀಡಿತು. ಅಲ್ಲದೇ ಪರೀಕ್ಷೆ ವಿಚಾರದಲ್ಲಿ ವಿದ್ಯಾರ್ಥಿಗೆ ಯಾಕೆ ಒತ್ತಡ ಹೇರುತ್ತೀರಿ ಎಂದು ಪ್ರಶ್ನೆ ಮಾಡಿದೆ. ಪೋಷಕರು ದಿಗಂತ್ ಜೊತೆ ಮಾತನಾಡಲು ಅವಕಾಶ ಕೊಡುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ದಿಗಂತ್ ವಿಷಯದಲ್ಲಿ ಮಕ್ಕಳ ಕಲ್ಯಾಣ ಸಮಿತಿ ನಿರ್ಧಾರ ಕೈಗೊಳ್ಳುವಂತೆ ಸೂಚನೆಯನ್ನು ನೀಡಿದೆ. ದಿಗಂತ್ ಸದ್ಯಕ್ಕೆ ಬೊಂದೆಲ್ ಮಕ್ಕಳ ಕಲ್ಯಾಣ ಸಮಿತಿ ವಶದಲ್ಲಿದ್ದಾನೆ.
ವಾದ-ಪ್ರತಿವಾದ ಆಲಿಸಿದ ವಿಭಾಗೀಯ ಪೀಠ ವಿಚಾರಣೆಯನ್ನು ಮುಂದೂಡಿದೆ.
Comments are closed.