Kanakamajalu: ಕನಕಮಜಲು; ಅಂಗಡಿಯಲ್ಲಿ ಕಳವು; ಕಳ್ಳರನ್ನು ಹಿಡಿದ ಊರಿನ ಜನ

Kanakamajalu: ಅಂಗಡಿ ಕಳವು ನಡೆಸುತ್ತಿದ್ದಾಗಲೇ ಊರವರು ಇಬ್ಬರು ಕಳ್ಳರನ್ನು ಹಿಡಿದ ಘಟನೆ ನಡೆದಿದೆ. ನಂತರ ವಿಚಾರಿಸಿ ಪೊಲೀಸರಿಗೊಪ್ಪಿಸಿರುವ ಘಟನೆ ಕನಕಮಜಲಿನಲ್ಲಿ ವರದಿಯಾಗಿದೆ.
ಕನಕಮಜಲು ಗ್ರಾಮದ ನರಿಯೂರು ಸೀತಾರಾಮ ಗೌಡರ ಕಟ್ಟಡದಲ್ಲಿರುವ ಧನಂಜಯ ಎಂಬುವರ ಮಾಲಕತ್ವದ ಶ್ರೀ ಗಣೇಶ್ ಸ್ಟೋರ್‌ನ ಒಳಗೆ ಜೋರು ಶಬ್ದ ಕೇಳುತ್ತಿದ್ದು, ಆ ಸಂದರ್ಭದಲ್ಲಿ ಅವರ ಮಗ ಬಂದು ನೋಡಿದಾಗ, ಆಗ ಹೊರಗಡೆ ರಿಟ್ಸ್ ಕಾರು ನಿಂತಿರುವುದು ಕಂಡು ಬಂದಿದೆ. ಅಲ್ಲದೆ ಶೆಟರ್ ಒಡೆದಿರುವುದು ಕಂಡು ಬಂದಿದೆ.
ಕೂಡಲೇ ಅವರು ತನ್ನ ಮನೆಮಂದಿಗೆ ಹಾಗೂ ಕನಕಮಜಲಿನ ಸ್ಥಳೀಯರಿಗೆ ವಿಷಯ ಹೇಳಿದ್ದಾರೆ. ಕೂಡಲೇ ಅಂಗಡಿಯೆದುರು ಜನ ಸೇರಿದ್ದು, ನಂತರ ಕಳ್ಳನನ್ನು ಹಿಡಿದುಕೊಂಡು ವಿಚಾರಿಸಿದಾಗ ಬಂಟ್ವಾಳದ ಸಜೀಪ ಮೂಲದ ಸುಹೈಲ್ ಹಾಗೂ ರಿಯಾಜ್ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ರಿಟ್ಸ್ ಕಾರು ಬಾಡಿಗೆ ಪಡೆದಿರುವುದು ಎನ್ನುವುದು ಅನಂತರ ತಿಳಿದು ಬಂದಿದೆ. ಸ್ಥಳೀಯರು ಸೇರಿ ಇತರರು ನಂತರ ಇಬ್ಬರು ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದರೆಂದು ವರದಿಯಾಗಿದೆ.
Comments are closed.