Zameer Ahmed: ಜೈನ್ ಸಮುದಾಯಕ್ಕೆ ನಿಗಮ ಬೇಕು ಎಂದ ಜಮೀರ್ ಅಹ್ಮದ್; ಸ್ಪೀಕರ್ ಕೇಳಿದ ಬ್ಯಾರಿ ಸಮುದಾಯದ ಪ್ರಶ್ನೆಗೆ ನಿರುತ್ತರರಾದ ಜಮೀರ್

Zameer Ahmed: ಸದನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಮಾನ್ಯ ವಸತಿ, ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಸಚಿವರಾದ ಬಿ.ಜೆಡ್ ಜಮೀರ್ ಅಹ್ಮದ್ ಖಾನ್ ಅವರು ಜೈನ್ ಕುರಿತು ಸಮುದಾಯದ ಬಗ್ಗೆ ಮಾಹಿತಿಯನ್ನು ನೀಡಿದ್ದರು. ನಾನು ಮಂತ್ರಿಯಾದ ಮೇಲೆ, ಸರ್ವೆ ಮಾಡಿದಾದ್ಮೇಲೆ ರಾಜ್ಯದಲ್ಲಿ ಒಟ್ಟು ಜೈನ್ ಸಮುದಾಯದ ಜನಸಂಖ್ಯೆ 20 ಲಕ್ಷಕ್ಕೂ ಹೆಚ್ಚಿದೆ. ಬೆಳಗಾಂ ಕ್ಷೇತ್ರದಲ್ಲೇ ಹೆಚ್ಚಿದ್ದಾರೆ. ಮುಖ್ಯಮಂತ್ರಿಗಳ ಮುಂದೆ ನಾನು ಈ ಪ್ರಪೋಸಲ್ ಇಟ್ಟಿದ್ದೇನೆ. ಆ ಸಮುದಾಯಕ್ಕೆ ಪ್ರತ್ಯೇಕ ನಿಗಮವೊಂದನ್ನು ಸ್ಥಾಪಿಸುವ ಅವಶ್ಯಕತೆ ಇದೆ ಎಂದು ಸ್ಪೀಕರ್ ಯು.ಟಿ.ಖಾದರ್‌ಗೆ ಹೇಳಿದರು.
ಈ ಸಂದರ್ಭದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರು ನಮ್ಮ ಬ್ಯಾರಿ ನಿಗಮದ ಬಗ್ಗೆ ಏನಾದರೂ ಆಯಿತಾ ಎಂದು ಕೇಳಿದರು. ಜೈನ್ ನಿಗಮದ ಜೊತೆಗೆ ಬ್ಯಾರಿ ನಿಗಮದ ಬಗ್ಗೆ ಏನಾದರೂ ಚರ್ಚೆ ಆಯಿತಾ? ಎಂದು ಕೇಳಿದಾಗ ನಿರುತ್ತರರಾದರು ಜಮೀರ್ ಅಹ್ಮದ್.
Comments are closed.