Chitradurga : ಜನಿಸಿದ ಮೂರೇ ದಿನಕ್ಕೆ ಅರ್ಧ ಲೀಟರ್ ಹಾಲು ಕೊಟ್ಟ ಕರು!!

Chitradurga : ಹಸು, ಎಮ್ಮೆ ಸೇರಿದಂತೆ ಯಾವುದೇ ಪ್ರಾಣಿಗಳು ಕರು ಹಾಕಿದ ಬಳಿಕ ಹಾಲು ನೀಡಲು ಪ್ರಾರಂಭಿಸುತ್ತವೆ. ಆದರೆ ಇಲ್ಲೊಂದೆಡೆ ವಿಸ್ಮಯ ಒಂದು ನಡೆದಿದ್ದು ಜನಿಸಿದ ಮೂರೇ ದಿನಕ್ಕೆ ಕರು ಒಂದು ಅರ್ಧ ಲೀಟರ್ ಹಾಲನ್ನು ಕೊಟ್ಟಿದೆ.

ಚಿತ್ರದುರ್ಗ(Chitradurga) ಜಿಲ್ಲೆಯ ಅನ್ನೇಹಾಳ ಗ್ರಾಮದ ನಿರಂಜನ ಮೂರ್ತಿ ಎಂಬವರ ಮನೆಯಲ್ಲಿ ಡೈರಿ ಹಸುವೊಂದು ಮರಿ ಹಾಕಿದೆ. ಆ ಕರು ಜನಿಸಿದ ಮೂರೇ ದಿನಕ್ಕೆ ಹಾಲು ಕೊಡಲು ಪ್ರಾರಂಭಿಸಿದೆ. ಅಂದಹಾಗೆ ಕರು ಹಾಕಿದ ಹಸುವಿನ ಹಾಲು ಕರೆಯಲು ರೈತ ಮುಂದಾದಂತ ಸಂದರ್ಭದಲ್ಲಿ ಕರುವಿನಲ್ಲಿ ಸಣ್ಣದಾಗಿ ಮೂಡಿದ್ದ ಕೆಚ್ಚಲಿನಿಂದ ಇದ್ದಕ್ಕಿದ್ದಂತೆ ಹಾಲು ಇಳಿಯಲು ಶುರುವಾಗಿದೆ. ಇದನ್ನು ಕಂಡು ರೈತ ದಿಗ್ ಭ್ರಮೆಗೊಂಡಿದ್ದಾನೆ. ಅಲ್ಲದೆ ಇದೇನೋ ಪವಾಡ ನಡೆದಿದೆ ಎಂದು ಸ್ಥಳೀಯರು ಕರುವಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿದ್ದಾರೆ.

ಇನ್ನೂ ನಿರಂಜನ ಮೂರ್ತಿ 6ತಿಂಗಳ ಹಿಂದೆ ಹಸುವನ್ನು ಖರೀದಿಸಿದ್ದರು. ಈಗಾಗಲೇ ಆ ಹಸು ಮೂರು ಹೆಣ್ಣು ಕರುಗಳಿಗೆ ಜನ್ಮ ನೀಡಿದೆ. ಈ ಹಿಂದಿನ ಎರಡೂ ಹೆಣ್ಣು ಕರುಗಳು ಸಹಜವಾಗಿದ್ದು, ಮೂರನೆಯದ್ದು ಮಾತ್ರ ಕಾಮಧೇನುವಿನಂತೆ ಹುಟ್ಟಿದ ಮೂರೇ ದಿನಕ್ಕೆ ಹಾಲು ನೀಡುತ್ತಿದೆ. ದಿನಕ್ಕೆ ಅರ್ಧ ಲೀಟರ್‌ಗೂ ಅಧಿಕ ಹಾಲು ಕರೆಯುವ ಕರುವನ್ನು ಗ್ರಾಮಸ್ಥರು ಕಾಮಧೇನುವೆಂದು ಪೂಜೆ ಮಾಡುತ್ತಿದ್ದಾರೆ.

Comments are closed.