Britain : ಬ್ರಿಟರ್ನ್ ಸಂಸತ್ತಲ್ಲಿ ಕನ್ನಡ ಮತ್ತು ತುಳು ಕವನ ವಾಚನ!!

Share the Article

Britain : ಬ್ರಿಟರ್ನ್ ಸಂಸತ್ತಿನಲ್ಲಿ ಮಾತೃಭಾಷಾ ದಿನಾಚರಣೆಯ ಅಂಗವಾಗಿ ರಾಧಿಕಾ ಜೋಷಿ ಕನ್ನಡ ಕವನ ಮತ್ತು ಡಾ. ಸರಿತಾ ತುಳು ಕವನ ವಾಚಿಸಿದ್ದಾರೆ.

25ನೇ ಅಂತರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯನ್ನು ಲಂಡನ್‌ನ ಬ್ರಿಟಿಷ್ ಸಂಸತ್ತಿನ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಇತ್ತೀಚೆಗೆ ವಿಜೃಂಭಣೆಯಿಂದ ಆಚರಿಸಲಾಗಿದ್ದು, ಇದರಲ್ಲಿ ಬ್ಯಾರೋನೇಸ್ ಗಾರ್ಡನ್ ಆತಿಥ್ಯದಲ್ಲಿ, ಸಂಸ್ಕೃತಿ ಸೆಂಟರ್ ಫಾರ್ ಕಲ್ಚರಲ್ ಎಕ್ಸಲೆನ್ಸ್ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಭಾರತ ಮತ್ತು ದಕ್ಷಿಣ ಏಷ್ಯಾದ 25 ಭಾಷೆಗಳ ವಿಶೇಷತೆಗಳನ್ನು ಕವನ ಮತ್ತು ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಅನಾವರಣಗೊಳಿಸಲಾಯಿತು . ಇದರಲ್ಲಿ ರಾಧಿಕಾ ಜೋಷಿ ಕನ್ನಡ ಕವನ ಮತ್ತು ಡಾ. ಸರಿತಾ ತುಳು ಕವನ ವಾಚಿಸಿದ್ದು ವಿಶೇಷವಾಗಿತ್ತು.

ಇನ್ನೂ ವಿವಿಧ ಕ್ಷೇತ್ರದ ಹವ್ಯಾಸಿ ಬರಹಗಾರರು ಮಾತೃಭಾಷೆಯಲ್ಲಿ ತಮ್ಮ ಕವನಗಳನ್ನು ವಾಚಿಸಿದರು. ಈ ಎಲ್ಲಾ ಕವನಗಳ ಸಂಗ್ರಹವನ್ನು ಒಳಗೊಂಡ ರೈಮ್ ಆಯಂಡ್ ರೆಸೊನಾನ್ಸ್ ಎಂಬ ಪುಸ್ತಕವನ್ನು ಇದೇವೇಳೆ ಬಿಡುಗಡೆ ಮಾಡಲಾಯಿತು.

ಇಷ್ಟೇ ಅಲ್ಲದೆ ಭಾರತದ ಮತ್ತಿತರ ಭಾಷಿಗರು ಕೂಡ ಕವನ ವಾಚಿಸಿದರು. ಸಂಸ್ಕೃತ ಕಾವ್ಯಕ್ಕೆ ಶಾಸ್ತ್ರೀಯ ನೃತ್ಯ ಪ್ರದರ್ಶನ, ಹಿಂದಿ ಕವನಕ್ಕೆ ಜನಪದ ನೃತ್ಯ ಪ್ರದರ್ಶಿಸಲಾಯಿತು.

Comments are closed.